ಆರ್ಟ್ ಆಫ್ ಲಿಂಗ್ನಿಂದ ರಕ್ತದಾನ ಶಿಬಿರ
ಉಡುಪಿ: ಆರ್ಟ್ ಆಫ್ ಲಿಂಗ್ ಸಂಸ್ಥೆ ಉಡುಪಿ ವತಿಯಿಂದ ರಕ್ತದಾನ ಶಿಬಿರವನ್ನು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಜ.12ರಂದು ಆಯೋಜಿಸಲಾಗಿತ್ತು.
ಶಿಬಿರವನ್ನು ಕಾಪು ತಾಲೂಕಿನ ತಹಶೀಲ್ದಾರ್ ಡಾ.ಪ್ರತಿಭಾ ಆರ್. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಎಚ್.ಅಶೋಕ್ ಹಾಗೂ ಆಸ್ಪತ್ರೆಯ ರಕ್ತ ನಿಧಿ ವಿಭಾಗದ ಮುಖ್ಯಸ್ಥೆ ವೀಣಾ ಮಾತನಾಡಿದರು.
ಸಂಸ್ಥೆಯ ಉಡುಪಿ ಜಿಲ್ಲೆಯ ಶಿಕ್ಷಕರ ಸಂಯೋಜಕ ದಿನೇಶ್ ಕುಂದಾಪುರ, ಶಿಕ್ಷಕ ವೃಂದ, ಪದಾಧಿಕಾರಿಗಳಾದ ನಾಗೇಶ್ ಶೇರಿಗಾರ್, ನಾಗೇಶ್ ನಾಯಕ್, ಧನರಾಜ್ ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು. ಆರ್ಟ್ ಆಫ್ ಲಿಂಗ್ ಸಂಸ್ಥೆಯ ಶಿಕ್ಷಕಿ ಸುನೀತ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
Next Story