ಉಚಿತ ನೇತ್ರ ತಪಾಸಣೆ ಶಿಬಿರ-ಕನ್ನಡಕ ವಿತರಣೆ
ಉಡುಪಿ, ಜ.15: ಯುವಬಂಟರ ಸಂಘ ಕಂಬಳಕಟ್ಟ- ಕೊಡವೂರು, ಜೆಎಸ್‌ಡಬ್ಲ್ಯೂ ಫೌಂಡೇಶನ್ ಮಂಗಳೂರು, ಲಯನ್ಸ್ ಕ್ಲಬ್ ಉಡುಪಿ-ಚೇತನ ಇವುಗಳ ಆಶ್ರಯದಲ್ಲಿ ಇಂಡಿಯಾ ವಿಷನ್ ಇನ್ಸ್ಟಿಟ್ಯೂಟ್ ಸಹಯೋಗ ದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವು ರವಿವಾರ ಆದಿವುಡುಪಿ ಶಾಲೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತಾನಾಡಿ, ನಾವು ಸಮಾಜಕ್ಕೆ ನಮ್ಮಿಂದಾದ ಆಗುವಷ್ಟು ಕೊಡುಗೆ ನೀಡುವುದು ಮಾನವ ಧರ್ಮ. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವ ಆಯೋಜಕರಿಗೆ ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿರಲಿ ಎಂದು ಶುಭಹಾರೈಸಿದರು.
ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಸಮಾಜ ಸೇವಕ ಸತೀಶ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಸುಮಾರು 200ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡಿದ್ದು, ಅರ್ಹ ಫಲಾನುಭವಗಳಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು.
ಯುವಬಂಟರ ಸಂಘ ಅಧ್ಯಕ್ಷ ಕೆ.ಶಿವಪ್ರಸಾದ್ ಶೆಟ್ಟಿ ಮಜಲುಮನೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಜೆಎಸ್‌ಡಬ್ಲ್ಯೂನ ಕಂಟೈನರ್ ಮತ್ತು ಕೋಲ್ ಟರ್ಮಿನಲ್ ವಿಭಾಗದ ಉಪಾಧ್ಯಕ್ಷ ಎಲ್.ರಾಮನಾಥನ್, ಜನರಲ್ ಮ್ಯಾನೇಜರ್ ವ್ಯಾಪಾರ ಮತ್ತು ಅಭಿವೃದ್ಧಿ ಕಂಟೈನರ್ ವಿಭಾಗದ ದಿಲೀಪ್ ಶೆಟ್ಟಿ, ಸಿ.ಎಸ್.ಆರ್. ಮ್ಯಾನೇಜರ್ ಪ್ರದೀಪ್ ಕೆ.ಆರ್., ಲಯನ್ಸ್ ಕ್ಲಬ್ ಜಿಲ್ಲೆ 317ಸಿ ನ ವಿಷನ್ ಕೇರ್ ಉಡುಪಿ ಜಿಲ್ಲಾ ಕ್ಯಾಬಿನೆಟ್ ಸದಸ್ಯ ದಿನಕರ ಶೆಟ್ಟಿ ಎಂ., ಯುವ ಉದ್ಯಮಿ ಪ್ರವೀಣ್ ಶೆಟ್ಟಿ ಅಂಬಲಪಾಡಿ, ಆದಿಉಡುಪಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಭಾಸ್ಕರ ಶೆಟ್ಟಿ, ಇಂಡಿಯಾ ವಿಷನ್ ಸಂಸ್ಥೆಯ ವೈದ್ಯೆ ಡಾ.ಜಾನೆಟ್, ಲಯನ್ಸ್ ಕ್ಲಬ್ ಉಡುಪಿ-ಚೇತನ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಯುವ ಬಂಟರ ಸಂಘದ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಆದಿಉಡುಪಿ ವಂದಿಸಿದರು. ಗೌರವಾಧ್ಯಕ್ಷ ಸುರೇಶ್ ಶೆಟ್ಟಿ ಕಂಬಳಕಟ್ಟ ಕಾರ್ಯಕ್ರಮ ನಿರೂಪಿಸಿದರು.