ಉಚಿತ ನೇತ್ರ, ಆರೋಗ್ಯ ತಪಾಸಣಾ ಶಿಬಿರ
ಕುಂದಾಪುರ, ಜ.15: ಕುಂದಾಪುರ ನಗರ ಹಾಗೂ ಸಂಚಾರ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪ್ರಸಾದ ನೇತ್ರಾಲಯ, ರೋಟರಿ ಕ್ಲಬ್ ಕುಂದಾಪುರ ಸಹಕಾರದೊಂದಿಗೆ ಕುಂದಾಪುರದ ಶಾಲಾ ಕಾಲೇಜುಗಳ ವಾಹನ ಚಾಲಕರು, ಆಟೋರಿಕ್ಷಾ ಚಾಲಕರಿಗೆ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ.ಕುಲಕರ್ಣಿ, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಲಿಯಾಖತ್, ನೇತ್ರ ತಜ್ಞ ಡಾ.ಗುರುಪ್ರಸಾದ್, ನಗರ ಠಾಣೆ ಉಪನಿರೀಕ್ಷಕ ನಂಜಾ ನಾಯ್ಕ್, ಸಂಚಾರ ಠಾಣೆ ಪಿಎಸ್‌ಐ ಪ್ರಸಾದಕುಮಾರ್ ಮೊದಲಾದ ವರು ಉಪಸ್ಥಿರಿದ್ದರು.
Next Story