ಕಲಾವಿದ ಮಹೇಶ್ ಮರ್ಣೆ ಅವರಿಂದ ಮೂರನೇ ದಾಖಲೆ
ಉಡುಪಿ, ಜ.15: ಕಲಾವಿದ ಮಹೇಶ್ ಮರ್ಣೆ ಇತ್ತೀಚಿಗೆ ಎರಡು ಗಂಟೆ 30 ನಿಮಿಷಗಳ ಕಾಲ ಉರಿ ಬಿಸಿಲಿನಲ್ಲಿ ಕುಳಿತು ಸೂರ್ಯನ ಕಿರಣಗಳಿಂದ ಮರದ ಹಲಗೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾವಚಿತ್ರವನ್ನು ರಚಿಸಿದ್ದು, ಕಿಂಗ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದೆ.
ಈ ಕಲಾಕೃತಿಯನ್ನು ರಾಷ್ಟ್ರಪತಿಗಳು ಮೆಚ್ಚಿ ಸಂದೇಶ ಕಳುಹಿಸಿದ್ದರು. ಮಹೇಶ್ ಮರ್ಣೆ ಅವರ ಕಲಾಕೃತಿಯು ಮೂರನೇ ದಾಖಲೆಗೆ ಸೇರ್ಪಡೆ ಗೊಳ್ಳುವುದರ ಮೂಲಕ ತಮ್ಮ ಕಲಾ ಸಾಧನೆಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಇವರು ಮರ್ಣೆ ಗ್ರಾಮದ ಶ್ರೀಧರ ಆಚಾರ್ಯ ಮತ್ತು ಲಲಿತ ದಂಪತಿ ಪುತ್ರ.
Next Story