ಕುಂದಾಪುರ ನೂತನ ಡಿವೈಎಸ್ಪಿ ಆಗಿ ಎಚ್.ಡಿ.ಕುಲಕರ್ಣಿ ಅಧಿಕಾರ ಸ್ವೀಕಾರ
ಕುಂದಾಪುರ, ಜ.15: ಕುಂದಾಪುರ ಪೊಲೀಸ್ ಉಪವಿಭಾಗದ ನೂತನ ಡಿವೈಎಸ್ಪಿಆಗಿ ಎಚ್.ಡಿ.ಕುಲಕರ್ಣಿ ಅಧಿಕಾರ ಸ್ವೀಕರಿಸಿದ್ದಾರೆ.
ಇವರು 1998ನೇ ಬ್ಯಾಚ್ ಪೊಲೀಸ್ ಅಧಿಕಾರಿಯಾಗಿದ್ದು ಉಡುಪಿ ಜಿಲ್ಲೆ ಸಹಿತ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ಕಳೆದ 4 ವರ್ಷಗಳ ಹಿಂದೆ ಡಿವೈಎಸ್ಪಿಆಗಿ ಪದೋನ್ನತಿ ಹೊಂದಿ ಬೆಂಗಳೂರು ಗ್ರಾಮಾಂತರ ಸೈಬರ್ ಕ್ರೈಮ್ ವಿಭಾಗದಲ್ಲಿ ಡಿವೈಎಸ್ಪಿ ಆಗಿದ್ದರು.
ನಂತರ ಬೆಂಗಳೂರು ಸಿಐಡಿಯಲ್ಲಿ ಡಿವೈಎಸ್ಪಿ ಆಗಿದ್ದ ಇವರನ್ನು ಇದೀಗ ಕುಂದಾಪುರ ಪೊಲೀಸ್ ಉಪವಿಭಾಗದ ಉಪಾಧೀಕ್ಷಕರಾಗಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಅವರ ವರ್ಗಾವಣೆ ಸ್ಥಾನಕ್ಕೆ ಎಚ್.ಡಿ.ಕುಲಕರ್ಣಿ ಅವರನ್ನು ನಿಯೋಜಿಸಲಾಗಿದೆ.
Next Story