ಗಿರಿ ಬ್ಯಾಡ್ಮಿಂಟನ್ ಕ್ಲಬ್‌ನ ಹೊಸ ಕ್ರೀಡಾಂಗಣ ಉದ್ಘಾಟನೆ
ಉಡುಪಿ, ಜ.16: ಹಾವಂಜೆ ಗಿರಿ ಬ್ಯಾಡ್ಮಿಂಟನ್ ಕ್ಲಬ್‌ನ ಹೊಸ ಕ್ರೀಡಾಂಗಣವನ್ನು ಹಿರಿಯಡ್ಕ ರೈತರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಕೊಳಲಗಿರಿ ಇತ್ತೀಚೆಗೆ ಉದ್ಘಾಟಿಸಿ ಶುಭಹಾರೈಸಿದರು.
ಗಿರಿ ಬ್ಯಾಡ್ಮಿಂಟನ್ ಕ್ಲಬ್‌ನ ನೂತನ ಲೋಗೋ ಮತ್ತು ಸಮವಸ್ತ್ರವನ್ನು ಯುವ ಉದ್ಯಮಿ ವಿಕ್ರಾಂತ್ ಶೆಟ್ಟಿ ಕೀಳಂಜೆ ಬಿಡುಗಡೆಗೊಳಿಸಿದರು. ಬಳಿಕ ಪಂದ್ಯಕೂಟಕ್ಕೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಪ್ರಾಂಕಿ ಡಿಸೋಜ ಚಾಲನೆ ನೀಡಿದರು.
ಉಡುಪಿ ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಸಂಘದ ಗೌರವಾಧ್ಯಕ್ಷ ಕಿಶೋರ್ ಆಚಾರ್ಯ, ಹಂಸಿನಿ ಸ್ಪೋರ್ಟ್ಸ್ ಶ್ರೀಶ ಆಚಾರ್ಯ, ಹಿಂದೂ ಗುರು ಸೇವಾ ಪರಿಷತ್‌ನ ಅಧ್ಯಕ್ಷ ಸುಧಾಕರ ಆಚಾರ್ಯ, ಹಾವಂಜೆ ಗ್ರಾಪಂ ಸಿಬ್ಬಂದಿ ಸದಾಶಿವ ಮೊದಲಾದವರು ಉಪಸ್ಥಿತರಿದ್ದರು. ವಿಜೇತ ತಂಡಗಳಿಗೆ ಟ್ರೋಫಿ ಗಳನ್ನು ವಿತರಿಸಲಾಯಿತು. ಡಾ.ಸಂದೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Next Story