ಅಕ್ರಮ ಅಕ್ಕಿ ಸಾಗಾಟ: ಓರ್ವನ ಬಂಧನ

ಕೋಟ, ಮಾ.18: ವಾಹನದಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಓರ್ವನನ್ನು ಕೋಟ ಪೊಲೀಸರು ಮಾ.17ರಂದು ಕೋಟ ಎಂಬಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಾಹನ ಚಾಲಕ ಉದಯ ಎಂದು ಗುರುತಿಸಲಾಗಿದೆ. ಈತ ಅಕ್ಕಿಯನ್ನು ಸಾಲಿಗ್ರಾಮದ ಸುರೇಂದ್ರ ಎಂಬವರ ಅಂಗಡಿಯಿಂದ ತಂದಿರುವುದಾಗಿ ತಿಳಿಸಿದ್ದಾನೆ. ಸ್ಥಳದಲ್ಲಿದ್ದ 42 ಚೀಲ ಅಕ್ಕಿ ಹಾಗೂ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story