ವಿಶ್ವ ರಂಗಭೂಮಿ ದಿನಾಚರಣೆ: ಮಾ.29ರಂದು ನಾಟಕ ಪ್ರದರ್ಶನ - ಸಂವಾದ
ಉಡುಪಿ, ಮಾ.25: ಉಡುಪಿಯ ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆಯ ಆಯೋಜನೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಮಾ.29ರ ಸಂಜೆ 5 ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಾಟಕ ಪ್ರದರ್ಶನ ಮತ್ತು ಸಂವಾದ ಜರಗಲಿದೆ.
ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಇವರಿಂದ ‘ದಿ ಫೈಯರ್’ ನಾಟಕ (ಮೂಲ: ಎಡುವರ್ಡೋ ಗೆಲಿಯಾನೋ ಕನ್ನಡಕ್ಕೆ : ಕೆ ಪಿ ಸುರೇಶ, ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನ: ಸಂತೋಷ್ ನಾಯಕ್ ಪಟ್ಲ) ಪ್ರದರ್ಶನ ನಡೆಯಲಿದ್ದು, ಬಳಿಕ ಚಿಂತಕ ಪ್ರೊ.ಕೆ ಫಣಿರಾಜ್ ಅವರ ನೇತೃತ್ವದಲ್ಲಿ ಪ್ರದರ್ಶನಗೊಂಡ ನಾಟಕದ ಬಗ್ಗೆ ಸಂವಾದ ಜರಗಲಿದೆ ಎಂದು ಸಂಸ್ಥೆಯ ನಾಟಕ ವಿಭಾಗದ ಸಂಚಾಲಕ ರಾದ ಸಂತೋಷ ಶೆಟ್ಟಿ ಹಿರಿಯಡ್ಕ ಮತ್ತು ಸಂತೋಷ್ ನಾಯಕ್ ಪಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story