ವಿದೇಶದಲ್ಲಿ ಕೆಲಸ ನೀಡುವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು

ಉಡುಪಿ, ಮಾ.25: ವಿದೇಶದಲ್ಲಿ ಕೆಲಸ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿಗಳು ವಿದೇಶದಲ್ಲಿ ಕೆಲಸ ನೀಡುವುದಾಗಿ ನಂಬಿಸಿ ಉಮೇಶ್ (41) ಎಂಬವರಿಂದ ಫೆ.18 ರಿಂದ ಹಂತ ಹಂತವಾಗಿ 2,32,060ರೂ. ಹಣವನ್ನು ಪಡೆದುಕೊಂಡಿದ್ದರು. ಮಾ.20ರಂದು ಉಮೇಶ್ ವಿದೇಶಕ್ಕೆ ತೆರಳಲು ಮುಂಬೈಗೆ ಹೋಗಿ ತನಗೆ ತಿಳಿಸಿದ ಅಪರಿಚಿತ ವ್ಯಕ್ತಿಗಳಿಗೆ ಕರೆ ಮಾಡಿದ್ದಲ್ಲಿ ಪೋನ್ ಸ್ವಿಚ್ ಆಫ್ ಆಗಿರುವುದು ಕಂಡುಬಂತು. ಹೀಗೆ ಆರೋಪಿಗಳು ನಂಬಿಸಿ, ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story