ಉದ್ಯಾವರ: ಶಾಲಾ ಮುಖ್ಯ ಶಿಕ್ಷಕಿಗೆ ಬೀಳ್ಗೊಡುಗೆ

ಉದ್ಯಾವರ, ಎ.1: ಇಲ್ಲಿನ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ನಿಯೋಜಿತ ಮುಖ್ಯ ಶಿಕ್ಷಕಿ ರತಿ ಅವರನ್ನು ಇಲಾಖೆಯ ಆದೇಶದಂತೆ ಅವರ ಮೂಲಶಾಲೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮರ್ಣೆ ಇಲ್ಲಿಗೆ ಆತ್ಮೀಯವಾಗಿ ಬೀಳ್ಗೊಡಲಾಯಿತು.
ಮುಂದಿನ ಜೂನ್ ತಿಂಗಳಲ್ಲಿ ವಯೋ ನಿವೃತ್ತಿ ಹೊಂದಲಿರುವ ರತಿ ಅವರು ಉದ್ಯಾವರದ ಹಿಂದೂ ಶಾಲೆಯಲ್ಲಿ ಮಾಡಿದ ಕರ್ತವ್ಯ ನಿರ್ವಹಣೆ ಗಾಗಿ ಅವರನ್ನು ಶ್ಲಾಘಿಸಿ, ಶಾಲು, ಹಾರ, ಫಲಪುಷ್ಪ, ಸ್ಮರಣಿಕೆಯೊಂದಿಗೆ ಗೌರವಿಸಿ ಬೀಳ್ಕೊಡಲಾಯಿತು.
ಶಾಲಾ ಸಂಚಾಲಕ ಸುರೇಶ್ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಶಾಲಾಡಳಿತ ಮಂಡಳಿಯ ಸದಸ್ಯ ಕೃಷ್ಣಕುಮಾರ್ ರಾವ್ ಮಟ್ಟು ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕಿ ಹೇಮಲತಾ ಹಾಗೂ ಸಹಶಿಕ್ಷಕರು ರತಿ ಅವರ ಶಿಕ್ಷಕಿಯಾಗಿ ಸೇವೆಯ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು.
ಸಹಶಿಕ್ಷಕ ವಿಕ್ರಮ್ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಅನುರಾಧಾ ವಂದಿಸಿದರು.
Next Story