ಬಾರ್‌ನಲ್ಲಿ ಅಕ್ರಮ ಮದ್ಯ ಮಾರಾಟ: ಇಬ್ಬರು ವಶಕ್ಕೆ

ಕಾರ್ಕಳ, ಎ.5: ಕಾರ್ಕಳ ಬಂಜಾರ ಬಾರ್‌ನಲ್ಲಿ ಪರವಾನಿಗೆ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೆಚ್ಚಿನ ಲಾಭಕ್ಕೋಸ್ಕರ ಎ.4ರಂದು ಬೆಳಗ್ಗೆ ಬಾರ್ ತೆರೆದು ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿರುವ ಕುರಿತ ಮಾಹಿತಿಯಂತೆ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ದಾಳಿ ನಡೆಸಿ 16,430ರೂ. ಮೌಲ್ಯದ ವಿವಿಧ ಮಾದರಿಯ ಮದ್ಯ ಹಾಗೂ 2,140ರೂ. ನಗದನ್ನು ವಶಡಿಸಿಕೊಂಡಿದ್ದಾರೆ.
ಈ ಕುರಿತು ಬಾರ್ ಮಾಲಕ ಸದಾಶಿವ ತಿಳಿಸಿದಂತೆ ಮದ್ಯ ಮಾರಾಟ ಮಾಡುತ್ತಿದ್ದ ಬಾರ್ ಮ್ಯಾನೇಜರ್ ಸುನಿಲ್ ಮತ್ತು ವಿನೀತ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story