ಕೆ.ಗೋವಿಂದ ಭಟ್ಟರಿಗೆ ‘ಯಕ್ಷವಿದ್ಯಾಮಾನ್ಯ’ ಪ್ರಶಸ್ತಿ ಪ್ರದಾನ

ಉಡುಪಿ, ಎ.12: ಪಲಿಮಾರು ಮಠದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಯಕ್ಷ ವಿದ್ಯಾಮಾನ್ಯ ಪ್ರಶಸ್ತಿ’ಯನ್ನು ತೆಂಕುತಿಟ್ಟಿನ ಪ್ರಸಿದ್ದ ಕಲಾವಿದ ರಾದ ಕೆ.ಗೋವಿಂದ ಭಟ್ಟರಿಗೆ ಪ್ರದಾನ ಮಾಡಲಾಯಿತು.
ಪಲಿಮಾರಿನಲ್ಲಿರುವ ಪಲಿಮಾರು ಮಠದ ಶ್ರೀಯೋಗದ್ಯಾಪೀಠದ ಘಟಿಕೋತ್ಸವ ಸಂದರ್ಭದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಈ ಬಾರಿಯ ಯಕ್ಷ ವಿದ್ಯಾಮಾನ್ಯ ಪ್ರಶಸ್ತಿಯನ್ನು ಕೆ. ಗೋವಿಂದ ಭಟ್ರಿಗೆ ನೀಡಿ ಗೌರವಿಸಿದರು.
ಹಿರಿಯ ವಿದ್ವಾಂಸರಾದ ಪಂಜ ಭಾಸ್ಕರ ಭಟ್ ಅಭಿನಂದನಾ ಮಾತು ಗಳನ್ನಾಡಿದರು. ಈ ಸಂದರ್ಭದಲ್ಲಿ ಕಾಣಿಯೂರು, ಸುಬ್ರಹ್ಮಣ್ಯ, ಸೋದೆ ಮತ್ತು ಪಲಿಮಾರಿನ ಕಿರಿಯ ಶೀಪಾದರು ಉಪಸ್ಥಿತರಿದ್ದರು.
50,000ರೂ. ಗೌರವ ನಿಧಿಯನ್ನೊಳಗೊಂಡಿರುವ ಈ ಪ್ರಶಸ್ತಿಯನ್ನು ಪಲಿಮಾರು ಮಠಾಧೀಶರು ಹಿರಿಯ ಯಕ್ಷಗಾನ ಕಲಾದರಿಗೆ ನೀಡುವ ಪರಂಪರೆಯನ್ನು ಕಳೆದ ಒಂದು ದಶಕದಿಂದ ಮುಂದುವರಿಸಿಕೊಂಡು ಬಂದಿದ್ದಾರೆ.
ಇದೇ ಸಂದರ್ಭದಲ್ಲಿ ಹಿರಿಯ ಪಾಕ ತಜ್ಞರಾದ ಕೆ. ಶ್ರೀಧರ ಭಟ್, ವೈದಿಕ ವಿದ್ವಾನ್ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ ಇವರಿಗೆ ಶ್ರೀಮಠದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.