ಬೇಸಿಗೆಯ ದಾಹ ತಣಿಸಲು ಜಲ ಅರವಟ್ಟಿಗೆ ಸ್ಥಾಪನೆ

ಉಡುಪಿ, ಎ.12: ಬೇಸಿಗೆಯ ಸುಡು ಬಿಸಲಧಗೆಯ ದಾಹ ತಣಿಸಲು, ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟ್ ಹಾಗೂ ಜೋಸ್ ಆಲುಕ್ಕಾಸ್ ಉಡುಪಿ ಮಳಿಗೆ ನಗರದ ಮಾರುಥಿ ವೀಥಿಕಾದಲ್ಲಿ ಜಲ ಅರವಟ್ಟಿಗೆ ಸ್ಥಾಪಿಸಿದೆ.
ಇಲ್ಲಿ ಮೃತ್ತಿಕೆಯ ಪಾತ್ರೆಯಲ್ಲಿ ತಂಪಾಗಿಸಿಟ್ಟಿರುವ ನೀರು, ಪಾನಕ, ಹಣ್ಣಿನ ಪಾನೀಯಗಳನ್ನು ಬೇಸಿಗೆ ಮುಗಿಯುವರೆಗೆ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತದೆ.
ಬೆಳ್ಳಿಯ ಕಳಶದ ಮೂಲಕ ನೀರು ವಿತರಿಸುವ ಮೂಲಕ ಜಿಲ್ಲಾ ಸರ್ಜನ್ ಡಾ.ಅಶೋಕ್ ಎಚ್. ಹಾಗೂ ನಗರಸಭೆಯ ಪೌರಾಯುಕ್ತ ಉದಯ ಕುಮಾರ್ ಶೆಟ್ಟಿ ಅರವಟ್ಟಿಗೆಗೆ ಚಾಲನೆ ನೀಡಿದರು.
ಈ ಸಂದರ್ಭ ಜೋಸ್ ಆಲೂಕ್ಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ರಾಜೇಶ್ ಎನ್.ಆರ್., ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಹೊಸಬದುಕು ಆಶ್ರಮದ ಸಂಚಾಲಕ ವಿನಯಚಂದ್ರ ಸಾಸ್ತಾನ, ಕೋಟಕ್ ಮಹೇಂದ್ರ ಬ್ಯಾಂಕಿನ ಸಿಬ್ಬಂದಿ, ಮಿತ್ರ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Next Story