ಉಡುಪಿ: ದಿ.ಕೆ.ಬಾಲಚಂದ್ರ ರಾವ್ ಪೋಟೊ ಅನಾವರಣ

ಉಡುಪಿ, ಎ.12: ಉಡುಪಿ ವಕೀಲರ ಸಂಘದ ಹಿರಿಯ ವಕೀಲರಾಗಿದ್ದು ಕಳೆದ ಸೆಪ್ಟಂಬರ್ನಲ್ಲಿ ನಿಧನ ರಾದ ಕೆಂಜೂರು ಬಾಲಚಂದ್ರ ರಾವ್ ಅವರ ಭಾವಚಿತ್ರವನ್ನು ಉಡುಪಿ ವಕೀಲರ ಸಂಘದಲ್ಲಿ ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಶುಕ್ರವಾರ ಅನಾವರಣಗೊಳಿಸಿದರು.
ನ್ಯಾಯಾಧೀಶರ ಮುಂದೆ ಉತ್ತಮ ವಾದ ಮಂಡಿಸುವುದರಿಂದ ಉತ್ತಮ ತೀಪು ಹೊರಬರಲು ಸಾಧ್ಯವಿದೆ ಎಂಬುದಕ್ಕೆ ಬಾಲಚಂದ್ರ ರಾಯರು ತಮ್ಮ ಕಕ್ಷಿದಾರರ ಪರವಾಗಿ ಮಂಡಿಸುತಿದ್ದ ವಾದವೇ ಸಾಕ್ಷಿಯಾ ಗಿತ್ತು. ಕಕ್ಷಿದಾರರ ಪರ ವಾದಿಸುವುದಲ್ಲದೇ ನ್ಯಾಯಾಧೀಶರು ಸರಿಯಾದ ತೀರ್ಮಾನಕ್ಕೆ ಬರಲು ಸಾಧ್ಯ ವಾಗುವಂತೆ ಸಲಹೆಗಳನ್ನೂ ಅವರು ನೀಡುತಿದ್ದರು. ಎದುರಾಳಿಯ ಪರವಾಗಿಯೂ ಅವರು ಕೆಲವು ಸಲಹೆ ನೀಡುತಿದ್ದ ಅಪರೂಪದ ವಕೀಲ ರಾಗಿದ್ದರು ಎಂದರು.
ವಕೀಲರಿಗೆ ಕೇವಲ ಕನಸುಗಳು ಸಾಕಾಗುವುದಿಲ್ಲ. ಆತನಲ್ಲಿ ದಾರ್ಶನಿಕತೆಯೂ ಇರಬೇಕಾಗುತ್ತದೆ. ಕಿರಿಯ ತಲೆಮಾರಿಗೆ ಸರಿ-ತಪ್ಪುಗಳನ್ನು ಹೇಳಿ ತಿದ್ದುವ ಗುಣ ಅವರಲ್ಲಿತ್ತು. ಹಿರಿಯ ನ್ಯಾಯವಾದಿ ಗಳಿಗಿ ರುವ ವಿಶಾಲ ದೃಷ್ಟಿಕೋನ, ದೂರದೃಷ್ಟಿಯನ್ನು ಕಿರಿಯರು ಪಡೆಯಬೇಕು ಎಂದವರು ಸಲಹೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್, ದಿ.ಕೆ.ಬಾಲಚಂದ್ರ ರಾಯರ ಪತ್ನಿ ಶಾಂತಾ ಬಿ.ರಾವ್, ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಸಂಪತ್ ಆನಂದ್ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ಕುಮಾರ್ ಸ್ವಾಗತಿಸಿದರೆ, ಹಿರಿಯ ನ್ಯಾಯವಾದಿ ಎನ್.ಕೆ.ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನು ಬಾಲಚಂದ್ರರ ವ್ಯಕ್ತಿತ್ವವನ್ನು ತೆರೆದಿಟ್ಟರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್.ವಂದಿಸಿದರೆ, ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.