ಮಣಿಪಾಲ ಲಾಡ್ಜ್‌ನಲ್ಲಿ ಡ್ರಗ್ಸ್ ಸೇವನೆ: ಮೂವರು ಆರೋಪಿಗಳ ಬಂಧನ

ಮಣಿಪಾಲ, ಎ.23: 80 ಬಡಗಬೆಟ್ಟು ಗ್ರಾಮದ ದಶರಥ ನಗರದ ಲಾಡ್ಜ್‌ವೊಂದರಲ್ಲಿ ಮಾದಕ ವಸ್ತುವನ್ನು ಹೊಂದಿದ್ದ ಮೂವರು ಆರೋಪಿ ಗಳನ್ನು ಮಣಿಪಾಲ ಪೊಲೀಸರು ಎ.22ರಂದು ಮಧ್ಯಾಹ್ನ ಬಂಧಿಸಿದ್ದಾರೆ.
ಕಾಪುವಿನ ಅಝರುದ್ದೀನ್, ಮಹಾರಾಷ್ಟ ರಾಜ್ಯದ ಪುಣೆಯ ರಾಜೇಶ್ ಪ್ರಕಾಶ್ ಜಾದವ್, ಮಲ್ಪೆಯ ನಾಜೀಲ್ ಯಾನೆ ಆಸೀಫ್ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಬಂದಂತೆ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಡೌನ್ ಟೌನ್ ಲಾಡ್ಜ್‌ನ ರೂಮಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ 40,000ರೂ. ಮೌಲ್ಯದ ಒಟ್ಟು 13.70 ಗ್ರಾಂ ತೂಕದ ಎಂಡಿಎಂಎ ಡ್ರಗ್ಸ್ ಮತ್ತು 10,500ರೂ. ಮೌಲ್ಯದ 225 ಗ್ರಾಂ ಗಾಂಜಾ, ಎರಡು ಮೊಬೈಲ್ ಹಾಗು ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story