ಕುಂದಾಪುರ| ಕಾಮಗಾರಿ ವಿವಾದ: ಗ್ರಾಪಂ ಸದಸ್ಯನಿಗೆ ಹಲ್ಲೆ

ಕುಂದಾಪುರ, ಎ.25: ಕಾಮಗಾರಿ ವಿಚಾರವಾಗಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಯೊಡ್ಡಿರುವ ಘಟನೆ ಎ.23ರಂದು ಸಂಜೆ 7.30ರ ಸುಮಾರಿಗೆ ಕುಂದಾಪುರ ಗಣೇಶ್ ಸ್ಟೋರ್ ಬಳಿ ನಡೆದಿದೆ.
ಗ್ರಾಪಂ ಸದಸ್ಯ, ಕರ್ಕುಂಜೆ ಗ್ರಾಮದ ಸುಕುಮಾರ(34) ಎಂಬವರಿಗೆ ಕಾರಿನಲ್ಲಿ ಬಂದ ಅನಿಲ್ ಹಾಗೂ ಮಯೂರ್ ಎಂಬವರು ಕಾಮಗಾರಿ ಬಗ್ಗೆ ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ. ಇದರಿಂದ ಗಾಯಗೊಂಡಿರುವ ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ವೇಳೆ ಮಂಗಳೂರಿನ ವ್ಯಕ್ತಿಯೊಬ್ಬ ಕರೆ ಮಾಡಿ ಸುಕುಮಾರ್‌ಗೆ ಗಣೇಶ ಮತ್ತು ಅನಿಲ್‌ನ ತಂಟೆಗೆ ಹೋದರೇ ನಾಳೆ ಒಳಗಡೆ ಮುಗಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story