ಎನ್ನೆಸ್ಸೆಸ್ಸ್ ವಾರ್ಷಿಕ ಶಿಬಿರ ಸಮಾರೋಪ
ಮಂಗಳೂರು: ಉಳ್ಳಾಲ ಅಳೇಕಲದ ಮದನಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮವು ಇತ್ತೀಚೆಗೆ ಮಂಜನಾಡಿ ಗ್ರಾಮದ ಅಸೈ ಮದಕ ಸರಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ನಡೆಯಿತು.
ಮದನಿ ಕಾಲೇಜಿನ ಪ್ರಾಂಶುಪಾಲೆ ಕೆ.ಕೆ ನಸೀರಾ ಬಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಮಾ ರೋಪ ಭಾಷಣಗೈದ ನಿವೃತ್ತ ಪ್ರಾಂಶುಪಾಲ ಟಿ. ಇಸ್ಮಾಯಿಲ್ ಹಾಗೂ ಅತಿಥಿಯಾಗಿ ಪಾಲ್ಗೊಂಡ ಎನ್ನೆಸ್ಸೆಸ್ ವಿಭಾಗೀಯ ಅಧಿಕಾರಿ ಸವಿತಾ ಎರ್ಮಾಳ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮದನಿ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಜಿ ಯು.ಪಿ ಅರಬಿ, ಬ್ರೈಟ್ ಮದನಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಸಯ್ಯದ್ ತ್ವಾಹಿರ್ ತಂಳ್, ಸರಕಾರಿ ಮುಸ್ಲಿಂ ವಸತಿ ಶಾಲೆಯ ಪ್ರಾಂಶುಪಾಲ ಉಮರಬ್ಬ, ಹಳೆ ವಿದ್ಯಾರ್ಥಿ ಅಬ್ದುಲ್ ಅಝೀಝ್ ತಂಝೀಲ್, ಮಂಜನಾಡಿ ಮಂಗಳಾಂತಿಯ ಮೌಲಾನ ಅಬ್ದುಲ್ ಕಲಾಂ ಆಝಾದ್ ಶಾಲೆಯ ಅಧ್ಯಾಪಕ ಶಿಹಾಬುದ್ದೀನ್, ಅಬ್ದುಲ್ ಅಝೀಝ್ ಉರುಮಣೆ, ಉಪನ್ಯಾಸಕ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.
ಶಿಬಿರದ ಅಂಗವಾಗಿ ನಡೆದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸ ಲಾಯಿತು. ಶಿಬಿರಾಧಿಕಾರಿ ಮದನಿ ಪ.ಪೂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಮುಹಮ್ಮದ್ ಅಶ್ರಫ್ ಸ್ವಾಗತಿಸಿ ದರು. ವಿದ್ಯಾರ್ಥಿ ನಾಯಕ ಮುಹಮ್ಮದ್ ಶಹೀರ್ ವಂದಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಮುಹಮ್ಮದ್ ಫಾಝಿಲ್ ಕಾರ್ಯಕ್ರಮ ನಿರೂಪಿಸಿದರು.