ಹೆಬ್ರಿ| ಜೀಪು- ಕಾರು ಢಿಕ್ಕಿ: ಓರ್ವ ಮೃತ್ಯು, ಐವರಿಗೆ ಗಾಯ
ಹೆಬ್ರಿ: ಜೀಪೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಐವರು ಗಾಯಗೊಂಡ ಘಟನೆ ಮಾ.28ರಂದು ಬೆಳಗ್ಗೆ ನಾಡ್ಪಾಲು ಗ್ರಾಮದ ಜಕ್ಕನಮಕ್ಕಿ ಎಂಬಲ್ಲಿ ನಡೆದಿದೆ.
ಮೃತರನ್ನು ಬಸ್ತೇವ್(53) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಕಾರು ಚಾಲಕ ಮನೋಜ್, ಆಶಾ, ನಿಶಾ, ಅರ್ಪಿತಾ, ಜೀಪು ಚಾಲಕ ಬೀರಪ್ಪ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಬ್ರಿ ಕಡೆಯಿಂದ ಸೋಮೇಶ್ವರ ಕಡೆ ಹೋಗುತ್ತಿದ್ದ ಜೀಪುಸೋಮೆಶ್ವರ ಕಡೆಯಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಎರಡು ವಾಹನಗಳಲ್ಲಿದ್ದ ಆರು ಗಾಯಗೊಂಡಿದ್ದು, ಇದರಲ್ಲಿ ಗಂಭೀರವಾಗಿ ಗಾಯಗೊಂಡ ಕಾರಿನಲ್ಲಿದ್ದ ಬಸ್ತೇವ್ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story