ಪಡುಬಿದ್ರಿ | ಸಮುದ್ರದ ಅಲೆಗೆ ಸಿಲುಕಿ ಇಬ್ಬರು ಯುವಕರು ಮೃತ್ಯು
ಪಡುಬಿದ್ರಿ : ಇಬ್ಬರು ಯುವಕರು ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಿರುವ ಘಟನೆ ಹೆಜಮಾಡಿಯ ಅಮಾಸಕರಿಯ ಬಳಿ ನಡೆದಿದೆ.
ಮೃತರನ್ನು ಅಮ್ಮಾನ್ (17), ಅಕ್ಷಯ್ (20) ಎಂದು ಗುರುತಿಸಲಾಗಿದೆ. ಇಂದು(ಸೋಮವಾರ) ಮಧ್ಯಾಹ್ನದ ವೇಳೆ ಸಮುದ್ರದ ಅಲೆಗೆ ಸಿಲುಕಿ ಯುವಕರು ಸಮುದ್ರ ಪಾಲಾಗಿದ್ದರು. ಕೂಡಲೇ ಅವರನ್ನು ಸ್ಥಳೀಯರು ಮೇಲೆಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾದರೂ, ಯುವಕರು ಮೃತಪಟ್ಟಿದ್ದಾರೆ. ಇನ್ನೊರ್ವ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
Next Story