ಅ.28ರಂದು ಕೋಟ ಎಸ್ಸೈ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
ಸಾಂದರ್ಭಿಕ ಚಿತ್ರ
ಉಡುಪಿ, ಅ.26: ಕಳವು ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಕೋಟ ಪೊಲೀಸ್ ಠಾಣಾ ಎಸ್ಸೈ ಸುಧಾ ಪ್ರಭು ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆ, ಸಿಐಟಿಯು ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವ ದಲ್ಲಿ ಪ್ರತಿಭಟನೆಯನ್ನು ಅ.28ರಂದು ಬೆಳಗ್ಗೆ 11ಗಂಟೆಗೆ ಕೋಟ ಪೊಲೀಸ್ ಠಾಣೆಯ ಎದುರು ಹಮ್ಮಿಕೊಳ್ಳಲಾಗಿದೆ.
ಅಮಾಯಕ ಕೂಲಿ ಕಾರ್ಮಿಕರಾದ ಆಶಾ ಮತ್ತು ಸುಜಾತ ಅವರನ್ನು ಸುಳ್ಳು ಕಳವು ಪ್ರಕರಣದಲ್ಲಿ ವಿಚಾರಣೆಗೆಂದು ಕೋಟ ಪೋಲಿಸ್ ಠಾಣೆಗೆ ಕರೆದು, ಎರಡು ದಿನ ಇರಿಸಿ, ಎಸ್ಸೈ ಸುಧಾ ಪ್ರಭು ಚಿತ್ರಹಿಂಸೆ ನೀಡಿ ದೌರ್ಜನ್ಯ ಎಸಗಿ ದ್ದಾರೆ. ಈ ದೌರ್ಜನ್ಯ ನಡೆದು ಒಂದು ತಿಂಗಳಾಗುತ್ತಾ ಬಂದರೂ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಪೋಲಿಸ್ ಇಲಾಖೆಯ ಈ ಕ್ರಮ ವನ್ನು ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಪ್ರಗತಿಪರ ಚಳುವಳಿ ಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.