ಕಾರ್ಕಳ| ಮಾಲ್ಟ್, 2 ಬಿಸ್ಕಿಟ್ ಗೆ 18ಸಾವಿರ ಬಿಲ್!; ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಆಕ್ರೋಶ
ಸಾಂದರ್ಭಿಕ ಚಿತ್ರ (credit; Grok)
ಕಾರ್ಕಳ: ಸಾರ್ವಜನಿಕರು, ಅಧಿಕಾರಿಗಳಿಗೆ ಉಪಹಾರಕ್ಕೆ ಮಾಲ್ಟ್, 2 ಬಿಸ್ಕಿಟ್ ಪೂರೈಸಿದ ಬಾಬ್ತು 18ಸಾವಿರ ಬಿಲ್ ಪಾವತಿ ಮಾಡಲಾಗಿದೆ ಆರೋಪಿಸಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಪಂಚಾಯತಿನ ಕೋರಂ ಇಲ್ಲದೆ ಮುಂದೂಡಲ್ಪಟ್ಟ ಗ್ರಾಮ ಸಭೆಯಲ್ಲಿ ಬುಧವಾರ ನಡೆಯಿತು.
ಪಂಚಾಯತ್ ವ್ಯಾಪ್ತಿಯಲ್ಲಿ ಬೋರ್ವೆಲ್ ಪಂಪ್ ರಿಪೇರಿಗಾಗಿ 4 ಲಕ್ಷಕ್ಕೂ ಅದಿಕ ಹಣವನ್ನು ಖರ್ಚು ಮಾಡಲಾಗಿದೆ. ಇದರಿಂದ ನಾಲ್ಕೈದು ಪಂಪ್ ಖರೀದಿ ಮಾಡಬಹುದಿತ್ತು, ಫ್ಯಾನ್ ರಿಪೇರಿ ಸಂದರ್ಭದಲ್ಲಿಯೂ ಇದೇ ತರಹ ಅಧಿಕ ಬಿಲ್ಗಳನ್ನು ಪಾವತಿಸುವ ಮೂಲಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಗ್ರಾ ಪಂ ಸದಸ್ಯ ಡೆನಿಯಲ್ ರೇಂಜರ್, ಅಧ್ಯಕ್ಷ ಹಾಗೂ ಪಿಡಿಒ ರವರ ಮೇಲೆ ಹಕ್ಕುಚ್ಯುತಿ ಆರೋಪವಿರುವಾಗ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಗಿರೀಶ್ ಅಮೀನ್, ಅದ್ಯಕ್ಷರ ಮೇಲೆ ಯಾವುದೇ ಅಂತಹ ಆರೋಪಗಳಿಲ್ಲ. ಅವರಿಗೆ ಅಧಿಕಾರಿಗಳಿಂದ ಯಾವುದೇ ನೋಟಿಸ್ ಜಾರಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ರಾ. ಹೆದ್ದಾರಿ ಬದಿಯಲ್ಲಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ನಕ್ಷೆೆಯಲ್ಲಿ ರಾಜ್ಯ ಹೆದ್ದಾಾರಿ ಎಂದು ತಪ್ಪಾಗಿ ನಮೂದಿಸಿದ್ದು, ಇದರ 9/11 ಖಾತೆ ಮುಟ್ಟುಗೋಲು ಅಥವಾ ತಡೆ ನೀಡಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು ಕಟ್ಟಡಕ್ಕೆೆ ಸಂಬಂಧಪಟ್ಟವರು ಕಂದಾಯ ಇಲಾಖೆಯಲ್ಲಿ ನಿಯಮಾವಳಿ ಉಲ್ಲಂಘಿಸಿದ್ದಾರೆ. ಇದಕ್ಕೆೆ ಕಂದಾಯ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆೆ ಲೋಪವಿದ್ದಲ್ಲಿ ಪರಿಶೀಲಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಕ್ರಮವಹಿಸುವ ಬಗ್ಗೆೆ ಗ್ರಾ. ಪಂ. ಅಧ್ಯಕ್ಷೆೆ ಸನ್ಮತಿ ನಾಯಕ್, ಪಿಡಿಒ ನಾಗರಾಜ್ ಎಂ. ಸ್ಪಷ್ಟನೆ ನೀಡಿದರು.
ಮೋರಿ ಮತ್ತು ಕಾಲುಸಂಕ ನಿರ್ಮಾಣ, ವಿದ್ಯುತ್ ಸಂಪರ್ಕ, ಬೀದಿ ದೀಪದ ಬಗ್ಗೆೆ ಚರ್ಚೆ ನಡೆಯಿತು. 35 ಲಕ್ಷ ರೂ. ವೆಚ್ಚದಲ್ಲಿ ಬಾವಿ ನಿರ್ಮಿಸಿದ್ದು, ಗ್ರಾಮದಲ್ಲಿ ಜನರಿಗೆ ಈ ನೀರು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಇದು ಎಲ್ಲ ಜನರಿಗೆ ಉಪಯೋಗವಾಗುವಂತೆ ಗ್ರಾ. ಪಂ. ಆಡಳಿತ ಮುತುವರ್ಜಿವಹಿಸಬೇಕು ಎಂದು ಜನರು ಒತ್ತಾಯಿಸಿದರು. ಗ್ರಾ. ಪಂ. ಕಚೇರಿಯಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಪಡೆಯಲು ವಿಳಂಬವಾಗುತ್ತಿರುವ ಬಗ್ಗೆೆ, ಪಂಪು ದುರಸ್ತಿ, ಚಹಾ ತಿಂಡಿಗೆ ಹೆಚ್ಚು ಬಿಲ್ ವ್ಯಯಿಸುತ್ತಿರುವ ಬಗ್ಗೆೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ಗ್ರಾಾ. ಪಂ. ಸದಸ್ಯರು, ಗ್ರಾಮಸ್ಥರು ಗ್ರಾ. ಪಂ. ಅಧ್ಯಕ್ಷರು, ನೋಡಲ್ ಅಧಿಕಾರಿಯನ್ನು ಒತ್ತಾಯಿಸಿದರು.
ಪಿಡಿಒ ನಾಗರಾಜ್ ಅವರು ಸಾರ್ವಜನಿಕರಿಗೆ ಸಮರ್ಪಕ ಸ್ಪಂದನೆ ನೀಡುತ್ತಿಲ್ಲ. ಉದ್ದೇಶಪೂರ್ವಕವಾಗಿ ಕಡತ ವಿಲೇವಾರಿ ವಿಳಂಬ ಮಾಡುತ್ತಿದ್ದಾರೆ. ಕೇಳಿದರೆ ತಪ್ಪು ಮಾಹಿತಿ ನೀಡುತ್ತಾರೆ. ಅವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಲೆಕ್ಕಪತ್ರಗಳ ಬಗ್ಗೆೆಯೂ ಸಮರ್ಪಕ ಉತ್ತರ ನೀಡುವುದಿಲ್ಲ. ಅವರನ್ನು ಮೇಲಾಧಿಕಾರಿಗಳು ಸೂಕ್ತ ತನಿಖೆಗೊಳಪಡಿಸಬೇಕು.
ಪ್ರಶ್ನಿಸಿದರೆ ಹಲ್ಲೆಗೆ ಮುಂದಾಗುವ ಪಿಡಿಒ ನಮಗೇ ಬೇಡವೇ ಬೇಡ ಎಂದು ರಾಜೇಶ್ ಆಕ್ರೋಶ ವ್ಯಕ್ತಪಡಿಸಿದರು.
ರಾ .ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ರಸ್ತೆಯ ಮದ್ಯೆ ಜೋಡುಕಟ್ಟೆಯಲ್ಲಿ ಡಿವೈಡರ್ ಅಳವಡಿಸಿರುವುದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಶಾಲಾ ವಾಹನ, ಡೈರಿಗೆ ಹಾಲು ತರುವವರು, ಪಂಚಾಯತ್ ಕಛೇರಿಗೆ ಬರುವವರು ಅರ್ಧ ಕಿಲೋ ಮೀಟರ್ ದೂರ ಹೋಗಿ ತಿರುಗಿ ಬರಬೇಕಾಗಿದೆ. ಸಂಬಂಧಪಟ್ಟ ಇಲಾಖೆಯವರು ಜೋಡುಕಟ್ಟೆ ಪೇಟೆಯಲ್ಲಿ ಡಿವೈಡರ್ ಬದಲಾವಣೆ ಮಾಡಿ ಜನಸಾಮಾನ್ಯರಿಗೆ ಉಪಯೋಗ ಮಾಡುವಂತೆ ವಿನಂತಿಸಿದರು
ನೋಡಲ್ ಅಧಿಕಾರಿ ವಿಜಯ ನಾಯ್ಕ್ ಉಪಸ್ಥಿಿತರಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಇಲಾಖೆ ಯೋಜನೆಗಳ ಬಗ್ಗೆೆ ಮಾಹಿತಿ ನೀಡಿದರು.
ಗ್ರಾಮ ಸಭೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಸಂಬಂಧಿಸಿ ಜನರು ಅಹವಾಲು ಕೇಳಲು ಯಾರು ಇಲ್ಲದಿರುವ ಬಗ್ಗೆೆ ಸಭೆಯಲ್ಲಿ ಅಸಮಾದಾನ ವ್ಯಕ್ತವಾಯಿತು. ಈ ಬಗ್ಗೆೆ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು, ಗ್ರಾಮದಲ್ಲಿ ಕ್ರಿಕೆಟ್ ಬೆಟ್ಟಿಿಂಗ್ ಹಾವಳಿ ಜೋರಾಗಿದ್ದು, ಎಲ್ಲೆೆಂದರಲ್ಲಿ ಬೆಟ್ಟಿಿಂಗ್ ನಡೆಯುತ್ತಿದ್ದು, ಇದರ ನಿಯಂತ್ರಣಕ್ಕೆೆ ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕಿದೆ ಎಂದು ಒತ್ತಾಯಿಸಿದರು.