ಉಡುಪಿ ಜಿಲ್ಲೆಯಾದ್ಯಂತ ಹಲವೆಡೆ ಮಳೆ| ಕುಂದಾಪುರದಲ್ಲಿ ಮೂರು ಮನೆಗಳಿಗೆ ಹಾನಿ: ಅಪಾರ ನಷ್ಟ
ಉಡುಪಿ, ಸೆ.1: ಉಡುಪಿ ಜಿಲ್ಲೆಯ ಕುಂದಾಪುರ ಸೇರಿದಂತೆ ಹಲವು ಕಡೆ ಭಾರೀ ಗಾಳಿಮಳೆಯಾಗಿದ್ದು, ಇದರಿಂದ ಕುಂದಾಪುರ ತಾಲೂಕಿನಲ್ಲಿ ಮೂರು ಮನೆಗಳಿಗೆ ಹಾಗೂ ಕೊಟ್ಟಿಗೆಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ.
ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಶ್ರೀಲತಾ ಎಸ್.ಶೆಟ್ಟಿ ಎಂಬವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ 25,000ರೂ. ತಲ್ಲೂರು ಗ್ರಾಮದ ಶಾರದ ಚಂದ್ರ ದೇವಾಡಿಗ ಎಂಬವರ ವಾಸ್ತವ್ಯದ ಮನೆ ಭಾಗಶಃ ಹಾನಿ.ಯಾಗಿ 60,000ರೂ. ಮತ್ತು ತೆಕ್ಕಟ್ಟೆ ಗ್ರಾಮದ ಕಮಲ ಅಚಾರ್ ಎಂಬವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾ ಗಿದ್ದು, ಇದರಿಂದ 60,000ರೂ. ನಷ್ಟ ಉಂಟಾಗಿದೆ.
ಕುಂದಾಪುರ ಆಲೂರು ಗ್ರಾಮದ ನೀಲು ಗಾಣಿಗ ಎಂಬವರ ಜಾನುವಾರು ಕೊಟ್ಟಿಗೆ ಬಿದ್ದು ಹಾನಿಯಾಗಿದ್ದು ಸುಮಾರು 30,000ರೂ. ನಷ್ಟವಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 24.9ಮಿ.ಮೀ. ಮಳೆಯಾಗಿದ್ದು, ಕಾರ್ಕಳ- 19.1ಮಿ.ಮೀ., ಕುಂದಾಪುರ- 28.0ಮಿ.ಮೀ., ಉಡುಪಿ- 22.1ಮಿ.ಮೀ., ಬೈಂದೂರು- 23.3ಮಿ.ಮೀ., ಬ್ರಹ್ಮಾವರ- 23.2ಮಿ.ಮೀ., ಕಾಪು- 28.1 ಮಿ.ಮೀ., ಹೆಬ್ರಿ- 32.7ಮಿ.ಮೀ ಮಳೆ ಆಗಿರುವ ಬಗ್ಗೆ ವರದಿಯಾಗಿದೆ.