ರಾಜೀವ್ ಗಾಂಧಿ- ಡಿ.ದೇವರಾಜ್ ಅರಸ್ ಜನ್ಮ ದಿನಾಚರಣೆ
ಉಡುಪಿ, ಆ.23: ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಗಾಂಧಿ ಸಂಘಟನೆ ಆಶ್ರಯದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಓಸ್ಕರ್ ಸ್ಮಾರಕ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿತ್ತು.
ಹಿರಿಯ ಕಾಂಸ್ ಮುಖಂಡ ಬಿ.ನರಸಿಂಹ ಮೂರ್ತಿ ಮತ್ತು ಫಾ.ವಿಲಿಯಂ ಮಾರ್ಟಿಸ್ ನಾಯಕರ ಭಾವಚಿತ್ರದ ಎದುರು ದೀಪ ಬೆಳಗಿಸಿದರು. ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಹರೀಶ್ ಕಿಣಿ ಮಾತನಾಡಿ, ಮಾಹಿತಿ ತಂತ್ರಜ್ಞಾನ ಮತ್ತು ಇಂಟರ್ನೆಟ್ ವ್ಯವಸ್ಥೆಯಲ್ಲಿ ಕ್ರಾಂತಿ ತಂದು ಭವ್ಯ ಭಾರತ ನಿರ್ಮಾಣವನ್ನು ಸಾಕರಗೊಳಿಸಿದ ರಾಜೀವ್ ಗಾಂಧಿ ಹಾಗೂ ಉಳುವವನೇ ಭೂ ಒಡೆಯ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿದ ದೇವರಾಜ ಅರಸು ಮಹಾ ಚೇತನರು ಎಂದರು.
ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಇಂದು ವ್ಯಾಪಕವಾದ ಸುದ್ದಿಗಳನ್ನು ಹರಡುವ ಬಿಜೆಪಿ ಸುಳ್ಳಿನ ಮೇಲೆಯೇ ದೇಶವನ್ನಾಳಲು ಹೊರಟಿದೆ. ಈ ಸುಳ್ಳುಗಳ ಮುಂದೆ ನಾವು ನಮ್ಮ ನಾಯಕರುಗಳಾದ ರಾಜೀವ್ ಗಾಂಧಿ, ದೇವರಾಜ್ ಅರಸು ಮಂತಾದವರ ಸಾಧನೆಗಳನ್ನು ಇರಿಸಿ ಸುಳ್ಳು ಪಡೆಯನ್ನು ನಿಶಸ್ತ್ರಿಕರಿಸಬೇಕು. ಈಮೂಲಕ ಭವ್ಯ ಭವಿಷ್ಯದ ಭಾರತ ಕಟ್ಟಬೇಕು ಎಂದು ಹೇಳಿದರು.
ಮುಖಂಡರಾದ ಪ್ರಸಾದ್ ಕಾಂಚನ್ ಮಾತನಾಡಿದರು. ಅಲೆವೂರು ಗ್ರಾಪಂ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಮೃತಾ ಪೂಜಾರಿ ಅವರನ್ನು ಗೌರವಿಸ ಲಾಯಿತು.
ರಾಜ್ಯ ಸಹ ಸಂಚಾಲಕಿ ರೋಶಿನಿ ವಲಿವರ್, ಗೌರವ ಸಲಹೆಗಾರರಾದ ವೆರೋನಿಕ ಕರ್ನೇಲಿಯೋ, ಜಿಲ್ಲಾ ಉಸ್ತುವಾರಿ ಡಾ.ಸುನೀತಾ ಶೆಟ್ಟಿ, ಕಿಶನ್ ಹೆಗ್ಡೆ, ರೋಶನ್ ಶೆಟ್ಟಿ, ಕುಶಲ ಶೆಟ್ಟಿ, ಕೀರ್ತಿ ಶೆಟ್ಟಿ, ಶಶಿಧರ್ ಶೆಟ್ಟಿ, ಶಬರೀಶ್, ಮೇರಿ ಡಿಸೋಜ, ಸೂರ್ಯ ಸಾಲಿಯಾನ್, ಶಂಕರ ನಾಯ್ಕ, ಮಾರ್ಗರೇಟ್ ಸೀಮಾ, ಶಾಂತಿ ಪಿರೇರಾ, ಸತೀಶ್ ಜಪ್ತಿ, ಜೋಯ್ಸ್ ಟೆನ್ನಿಸ್, ಲಿಲ್ಲಿ ಡಿಸೋಜ, ಉದಯ, ನಜೀರ್, ರೋನಾಲ್ಡ್, ಲಕ್ಷ್ಮಿ ನಾರಾಯಣ, ಕುಮುದ, ವಾರೀಜಾಕ್ಷಿ ಮತ್ತಿತರರು ಭಾಗವಹಿಸಿದ್ದರು. ಆನಂದ್ ಪೂಜಾರಿ ಸ್ವಾಗತಿಸಿದರು. ರೋಶನ್ ಬರಟೋ ವಂದಿಸಿದರು. ಅಮೃತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.