ಕೃಷಿ ಕೂಲಿಕಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ
ಶಿರೂರು : ಕೃಷಿಕೂಲಿಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ನೇತೃತ್ವದಲ್ಲಿ ಹಕ್ಕೊತ್ತಾಯದ ಸಾಮೂಹಿಕ ಮನವಿಯನ್ನು ಇಂದು ನಡೆದ ಶಿರೂರು ಗ್ರಾಪಂ ಗ್ರಾಮ ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ನಾಗರತ್ನ ಆಚಾರ್ ಮೂಲಕ ಕೇಂದ, ರಾಜ್ಯ ಸರಕಾರಕ್ಕೆ ಸಲ್ಲಿಸಲಾಯಿತು.
ಕೃಷಿಕೂಲಿಕಾರರ ಕೂಲಿ ದಿನ ಒಂದರ ೬೦೦ರೂ. ಹಾಗೂ ವಾರ್ಷಿಕ ೨೦೦ ದಿನಗಳ ಕೆಲಸ ಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಕಾಪ್ಸಿ ನೂರ್ ಮುಹಮ್ಮದ್, ಸದಸ್ಯರಾದ ಸಂಧ್ಯಾ, ರವೀಂದ ಶೆಟ್ಟಿ, ಮುಹಮ್ಮದ್ ಶೋಯಬ್, ನಾಗಯ್ಯ ಶೆಟ್ಟಿ ಉದಯ, ಜಿಯು, ದಿಲ್‌ಶಾದ್ ಬೇಗ್, ಶಕೀಲ್ ಅಹಮ್ಮದ್, ತಾರಿಸಲ್ಲಾ ಮಹಮ್ಮದ್ ಗೌಸ್, ಮೌಲಾನಾ ಅಬ್ದುಲ್ ಸತ್ತಾರ್, ರವೀಂದ್ರ ಶೆಟ್ಟಿ, ಮುಕ್ರಿ ಮುಹಮ್ಮದ್ ಅಲ್ತಾಫ್, ಬೀಬಿ ರಶೀದಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಶೆಟ್ಟಿ, ನೋಡಲ್ ಅಧಿಕಾರಿ ಲೋಕೇಶ್ ವೇದಿಕೆಯಲ್ಲಿದ್ದರು.
ನಿಯೋಗದಲ್ಲಿ ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಉದ್ಯೋಗ ಮಿತ್ರ ಕಾಯಕ ಗುಂಪಿನ ಮುಖಂಡರಾದ ರತ್ನ ನಾಗರಾಜ, ವೇದಾವತಿ ಗೋಪಾಲ, ವಿನೋದ ಗಣೇಶ ಉದ್ಯೋಗ ಖಾತ್ರಿ ಮೊದಲಾದವರು ಉಪಸ್ಥಿತರಿದ್ದರು.