ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ ನಿಧನ
ಉಡುಪಿ: ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ (75) ಬುಧವಾರ ನಿಧನರಾಗಿದ್ದಾರೆ.
ಶಿರ್ವ ಮೂಲದ ಲೂಯಿಸ್ ಮಿನೇಜಸ್ ಮತ್ತು ಮೇರಿ ಮ್ಯಾಗ್ಡೆಲೀನ್ ಮಿನೇಜಸ್ ದಂಪತಿಯ ಮಗನಾಗಿ ಜುಲೈ 28, 1948 ರಂದು ಬ್ಯಾಪ್ಟಿಸ್ಟ್ ಮಿನೇಜಸ್ ಜನಿಸಿದರು.
ರೋಮ್ ನ ಲ್ಯಾಟರನ್ ವಿಶ್ವವಿದ್ಯಾಲಯದಿಂದ ನೈತಿಕ ದೇವತಾಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಬ್ಯಾಪ್ಟಿಸ್ಟ್ ಮಿನೇಜಸ್ ಅವರು, 1995ರಲ್ಲಿ ಮಂಗಳೂರಿನ ಜೆಪ್ಪುವಿನಲ್ಲಿರುವ ಸೈಂಟ್ ಜೋಸೆಫ್ ಇಂಟರ್-ಡಯಾಸಿಸ್ ಸೆಮಿನರಿಯ ಆಡಳಿತಾಧಿಕಾರಿಯಾಗಿ ನೇಮಕಗೊಂಡರು.1997ರಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾಗಿ 2007ರ ವರೆಗೆ ಈ ಹುದ್ದೆಯನ್ನು ನಿರ್ವಹಿಸಿದರು.
2012 ರಲ್ಲಿ ಉಡುಪಿಯ ಹೊಸ ಧರ್ಮಪ್ರಾಂತ್ಯದ ಮೊದಲ ವಿಕಾರ್ ಜನರಲ್ ಆಗಿ ನೇಮಕಗೊಂಡ ಬ್ಯಾಪ್ಟಿಸ್ಟ್ ಅವರು, ಅದಕ್ಕೂ ಮುನ್ನ ಅವರು ಉಡುಪಿ ಜಿಲ್ಲೆಯ ಎಪಿಸ್ಕೊಪಲ್ ವಿಕಾರ್ ಆಗಿ ಸೇವೆ ಸಲ್ಲಿಸಿದ್ದರು.ಕಳೆದ ಹತ್ತೂವರೆ ವರ್ಷಗಳಿಂದ ಧರ್ಮಪ್ರಾಂತ್ಯದ ಒಳಿತಿಗಾಗಿ ಬಿಷಪ್ ಅವರ ವಿನಮ್ರ ಸೇವಕ ಮತ್ತು ನಿಷ್ಠಾವಂತ ಸಹಯೋಗಿಯಾಗಿ ಕೆಲಸ ಮಾಡಿದ್ದರು.
ಬ್ಯಾಪ್ಟಿಸ್ಟ್ ಮಿನೇಜಸ್ ಅವರ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ, ಪ್ರಸ್ತುತ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ ಡಾ ರೋಶನ್ ಡಿಸೋಜಾ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಸಂತಾಪ ಸೂಚಿಸಿದ್ದಾರೆ.