ಉಡುಪಿ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಆಯ್ಕೆ
ರೆನೋಲ್ಡ್ ಪ್ರವೀಣ್ಕುಮಾರ್, ರಾಜೇಶ್ ಎ.ಆರ್.
ಉಡುಪಿ, ಸೆ.26: ಸೋಮವಾರ ನಡೆದ ಉಡುಪಿ ಜಿಲ್ಲಾ ವಕೀಲರ ಸಂಘದ 2023-25ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ ಎ.ಆರ್. ಚುನಾಯಿತರಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೆನೋಲ್ಡ್ ಪ್ರವೀಣ್ ಕುಮಾರ್ ಅವರು ವಿವಿಧ ಅವಧಿಗಳಲ್ಲಿ 10 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿ ಯಾಗಿ ಕಾರ್ಯ ನಿರ್ವಹಿಸಿದ್ದು, ನಿನ್ನೆ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆ ಯಲ್ಲಿ ಚಲಾವಣೆಯಾದ 659 ಮತಗಳ ಪೈಕಿ 444 ಮತಗಳನ್ನು ಪಡೆದು, ತನ್ನ ಪ್ರತಿಸ್ಪರ್ಧಿ ವಾಣಿ ವಿ.ರಾವ್ ಅವರನ್ನು 219 ಮತಗಳ ಅಂತರದಿಂದ ಹಿಮ್ಮೆಟ್ಟಿಸಿದರು.
ಸಂಘಕ್ಕೆ ನೂತನವಾಗಿ ಚುನಾಯಿತರಾದ ಇತರ ಪದಾಧಿಕಾರಿಗಳ ವಿವರ ಹೀಗಿದೆ. ಉಪಾಧ್ಯಕ್ಷ: ಮಿತ್ರಕುಮಾರ್ ಶೆಟ್ಟಿ, ಜಂಟಿ ಕಾರ್ಯದರ್ಶಿ: ರವೀಂದ್ರ ಬೈಲೂರು, ಖಜಾಂಚಿ: ಗಂಗಾಧರ ಎಚ್.ಎಮ್., ಸಾಂಸ್ಕೃತಿಕ ಕಾರ್ಯದರ್ಶಿ: ಸಂತೋಷ್ ಕುಮಾರ್ ಮೂಡುಬೆಳ್ಳೆ, ಕ್ರೀಡಾ ಕಾರ್ಯದರ್ಶಿ: ಸುಮಿತ್ ಹೆಗ್ಡೆ.
ಕಾರ್ಯಕಾರಿ ಸಮಿತಿ ಸದಸ್ಯರು: ಪ್ರಜ್ವಲ್ ಎಸ್. ಶೆಟ್ಟಿ, ರಾಘವೇಂದ್ರ ಎಸ್., ಅಭಿಶೇಕ್ ಜೆನ್ನಿ, ಶಾರದಾ, ಆದಿತ್ಯ, ನಾಗರಾಜ ಉಪಾಧ್ಯ, ಶೋಭಿತ್ ನೊರೊನ್ಹಾ, ಶಿಲ್ಪಾ, ಆರೂರು ಸುಕೇಶ್ ಶೆಟ್ಟಿ, ಶ್ರೀಧರ್ ಸುಬ್ರಾಯ ಭಟ್, ಗುರು ಪ್ರಸಾದ್ ಜಿ.ಎಸ್., ನಾಗರತ್ನ ನಾಯ್ಕ್, ಬಾಲಚಂದ್ರ, ಸಂಜಯ್ ಕರ್ಕೇರ, ಪ್ರಸಾದ್ ಕುಮಾರ್ ಶೆಟ್ಟಿ,ಲವೀನಾ ಫೆರ್ನಾಂಡಿಸ್, ಸಂಜೀವ ಎ., ಗಣೇಶ್ಕುಮಾರ್ ಮಟ್ಟು, ಹಮ್ಜತ್ ಮತ್ತು ಅಮೃತಕಲಾ.