ಭಾರತ ಕ್ರಿಕೆಟ್ ತಂಡಕ್ಕೆ ಮರಳು ಶಿಲ್ಪದ ಶುಭಹಾರೈಕೆ

ಕಾಪು, ಮಾ.8: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ ಕಲಾವಿದರು ಮರಳ ಶಿಲ್ಪ ರಚಿಸುವ ಮೂಲಕ ಶುಭ ಹಾರೈಕೆ ಮಾಡಿದ್ದಾರೆ.
ಮಣಿಪಾಲ್ ಸ್ಯಾಂಡ್ ಹಾರ್ಟ್‌ನ ಕಲಾವಿದರಾದ ಶ್ರೀನಾಥ್ ಮಣಿಪಾಲ್, ವೆಂಕಿ ಪಲಿಮಾರು, ರವಿ ಹಿರೆಬೆಟ್ಟು, ಪುರಂದರ ಮಲ್ಪೆಕಾಪು ಕಡಲ ಕಿನಾರೆಯಲ್ಲಿ ಭಾರತ ತಂಡಕ್ಕೆ ಶುಭಕೋರುವ ಮರಳಶಿಲ್ಪವನ್ನು ರಚಿಸಿದ್ದಾರೆ. ಕಡಲಕಿನಾರೆಗೆ ಆಗಮಿಸಿದ ಪ್ರವಾಸಿಗರಿಗೆ ಈ ಕಲಾಕೃತಿಯು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
Next Story