ಮಣಿಪಾಲದಲ್ಲಿ ಐ-ಟಾಕ್‌ನ ಎರಡನೇ ಆವೃತ್ತಿಯ ಸಂಪನ್ನ
ಮಣಿಪಾಲ, ಅ.15: ಇಂಡಿಯನ್ ಬ್ಯೂರೋ ಆಫ್ ಅಡ್ಮಿನಿಸ್ಟ್ರೇಟರ್ಸ್(ಐ ಬ್ಯಾಟ್) ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಡಿಪಾರ್ಟ್ಮೆಂಟ್ ಓಫ್ ಕಾಮರ್ಸ್ ವಿಭಾಗದ ಜಂಟಿ ಆಶ್ರಯದಲ್ಲಿ ಐ-ಟಾಕ್‌ನ ಎರಡನೇ ಆವೃತ್ತಿಯು ಮಣಿಪಾಲದಲ್ಲಿ ಶನಿವಾರ ಸಂಪನ್ನಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣಾ ಮಾತನಾಡಿ, ಇಂದಿನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಾಂತ್ರಿಕ ಭೂ ದೃಶ್ಯದಲ್ಲಿ ನಾಯಕ ತ್ವವು ಬಹುಮುಖತೆ ಮತ್ತು ದೂರದೃಷ್ಟಿಯನ್ನು ಬಯಸುತ್ತದೆ. ಬದಲಾವಣೆಯನ್ನು ಅಳವಡಿಸಿಕೊಳ್ಳುವುದು ಈಗ ಪರಿಣಾಮಕಾರಿ ನಾಯಕರ ಲಕ್ಷಣವಾಗಿದೆ ಎಂದು ಹೇಳಿದರು.
ಕಲಾವಿದ, ಚಿಂತಕ ಡಾ.ಎಂ.ಪ್ರಭಾಕರ ಜೋಶಿ ದಿಕ್ಸೂಚಿ ಭಾಷಣ ಮಾಡಿದರು. ಕೆಎಂಸಿ ಪ್ರಾಧ್ಯಾಪಕ ಡಾ.ರಾಹುಲ್ ಮ್ಯಾಗಜೀನ್, ಸಂಪನ್ಮೂಲ ವ್ಯಕ್ತಿಗಳಾದ ಮನೀಶ್ ಥಾಮಸ್, ಡಾ.ರಚನಾ, ನವನೀತ್ ಗಣೇಶ್, ಶ್ರೀಪತಿ ರಂಗಾ ಭಟ್ ಮತ್ತು ಸಿನಿ ಕಲಾವಿದ ವೇಣುಮಾಧವ್ ಭಟ್ ಎಂ. ಉಪನ್ಯಾಸ ನೀಡಿದರು.
ಮಣಿಪಾಲ ಡಿಓಸಿ ಮುಖ್ಯಸ್ಥ ಡಾ.ಸಂದೀಪ್ ಶೆಣೈ ಸ್ವಾಗತಿಸಿದರು. ಐ ಬ್ಯಾಟ್ ಅಧ್ಯಕ್ಷ ಸಿಎ ಕೆ.ರಾಜಾರಾಮ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ದಶರಥ ರಾಜ್ ಕೆ.ಶೆಟ್ಟಿ ವಂದಿಸಿದರು. ಡಾ.ಎವೆರಿಲ್ ಫೆರ್ನಾಂಡಿಸ್ ಮತ್ತು ವಿಟ್ಟಲ್ ಕಾಮತ್ ಸಹಕರಿಸಿದರು. ಇದೇ ಸಂದರ್ಭದಲ್ಲಿ ಪ್ರಸಾದ್ ರಾವ್, ಡಾ.ವಿಕ್ರಮ್ ಬಾಳಿಗಾ, ಡಾ.ರೀಟಾ ರಾಣಿ ಚೋಪ್ರಾ, ಡಾ.ಅಂಬಿಗೈ ರಾಜೇಂದ್ರನ್ ಮೊದಲಾದವರು ಉಪಸ್ಥಿತರಿದ್ದರು.