ಸೀರತ್ ಅಭಿಯಾನ: ಸಾರ್ವಜನಿಕ ರಕ್ತದಾನ ಶಿಬಿರ
ಉಡುಪಿ, ಸೆ.16: ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜು ಹಾಗೂ ಜೀವ ಸಂಜೀವಿನಿ ಉಡುಪಿ ಇವರ ಸಹಯೋಗ ದೊಂದಿಗೆ ಎಸ್‌ಐಓ ಉಡುಪಿ ಜಿಲ್ಲೆ, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್, ಗರ್ಲ್ಸ್ ಇಸಾಮಿಕ್ ಆರ್ಗನೈಸೇಶನ್ ಹಾಗೂ ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ಸಂಯೋಜನೆಯೊಂದಿಗೆ ಪ್ರವಾದಿ ಮಹಮ್ಮುದ್(ಸ) ಮಹಾನ್ ಚಾರಿತ್ರ್ಯವಂತ -ಸೀರತ್ ಅಭಿಯಾನ’ದ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರವನ್ನು ಇಂದು ಉಡುಪಿಯ ಜಾಮಿಯ ಮಸೀದಿ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ.ಮಹಮ್ಮದ್ ಅಝೀಝ್ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ. ಪ್ರತಿನಿತ್ಯ ಸಾವಿರಾರು ಜನರು ಸರಿಯಾದ ಸಮಯಕ್ಕೆ ರಕ್ತ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಬಹಳಷ್ಟು ಇದೆ. ಇದನ್ನು ಮನಗಂಡು ಸಂಘಟಕರು ರಕ್ತದಾನ ಶಿಬಿರವನ್ನು ಆಯೋಜಿಸಿದ್ದ ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಶಿಬಿರದಲ್ಲಿ ಎಸ್‌ಐಓ ಜಿಲ್ಲಾಧ್ಯಕ್ಷ ಅಯಾನ್ ಮಲ್ಪೆ, ಸಾಲಿಡಾರಿಟಿ ಯೂಥ್ ಮೂವ್‌ಮೆಂಟ್ ಉಡುಪಿ ಜಿಲ್ಲಾಧ್ಯಕ್ಷ ನಬೀಲ್ ಗುಜ್ಜರಬೆಟ್ಟು ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ಉಡುಪಿ ಜಿಲ್ಲಾ ಸಂಚಾಲಕ ಬಿಲಾಲ್ ಮಲ್ಪೆ, ಜಿಐಓ ಜಿಲ್ಲಾಧ್ಯಕ್ಷೆ ನಿಝ್ಲಾ ಫಾತಿಮಾ ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 50 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.