ದ್ವೈತ ಸಿದ್ಧಾಂತದ ಹಿರಿಯ ವಿದ್ವಾಂಸ ಪ್ರೊ.ಕೆ.ಹರಿದಾಸ ಉಪಾಧ್ಯಾಯ ನಿಧನ
ಉಡುಪಿ, ಆ.9: ಉಡುಪಿ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ದ್ವೈತ ಸಿದ್ಧಾಂತದ ಮಹಾನ್ ವಿದ್ವಾಂಸ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಪ್ರೊ.ಕೆ. ಹರಿದಾಸ ಉಪಾಧ್ಯಾಯ (94) ಬುಧವಾರ ರಾತ್ರಿ ನಿಧನರಾದರು. ಅವರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ಆಸ್ಥಾನ ವಿದ್ವಾಂಸರಾಗಿದ್ದ ಪ್ರೊ.ಉಪಾಧ್ಯಾಯ, ಇಲ್ಲಿನ ಅಷ್ಟಮಠಗಳಿಂದಲೂ ಪರ್ಯಾಯದ ಸಂದರ್ಭಗಳಲ್ಲಿ ಸನ್ಮಾನಿತರಾಗಿದ್ದರು. ಅವರು ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು.
ಪ್ರೊ.ಹರಿದಾಸ ಉಪಾಧ್ಯಾಯರ ನಿಧನಕ್ಕೆ ಅವರಲ್ಲಿ ವೇದಾಂತಶಾಸ್ತ್ರ ಅಧ್ಯಯನ ಮಾಡಿದ್ದ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story