ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಕುಂದಾಪುರ, ಜು.22: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕುಂದಾಪುರದ ಶೆಟ್ಟಿ ಐಸ್ಪ್ಲಾಂಟ್ ಬಳಿಯ ನಿವಾಸಿ ಸತ್ಯಭಾಮ ಶೆಟ್ಟಿ(76) ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ಜು.20ರಂದು ರಾತ್ರಿ ವೇಳೆ ಮನೆಯ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹೆರೂರು ಗ್ರಾಮದ ರಾಗಿ ಹಕ್ಲುಮೇಲ್ ನಿವಾಸಿ ಚಂದ್ರ ಕುಲಾಲ್(57) ಎಂಬವರು ಜು.21ರಂದು ಬೆಳಗ್ಗೆ ಮನೆ ಸಮೀಪ ಗದ್ದೆ ಬಳಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story