ಪ್ರತ್ಯೇಕ ಪ್ರಕರಣ: ಉಡುಪಿ ಜಿಲ್ಲೆಯಲ್ಲಿ ಒಟ್ಟು ಐವರು ಆತ್ಮಹತ್ಯೆ
ಉಡುಪಿ, ಸೆ.3: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದಿನಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣ ಗಳಲ್ಲಿ ಒಟ್ಟು ಐದು ಮಂದಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಚಿತ್ರಪಾಡಿ ಗ್ರಾಮದ ವಿಮಲ(47) ಎಂಬವರು ಮನೆಯ ಸಮಸ್ಯೆಯಿಂದ ಮಾನಸಿಕ ವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.3ರಂದು ಬೆಳಗ್ಗೆ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಪಶ್ಚಿಮ ಬಂಗಾಲ ಮೂಲದ ಮಜೂರು ಗ್ರಾಮದ ಬಾಡಿಗೆ ಮನೆ ನಿವಾಸಿ ಶುಭಮಲ್ (17) ಎಂಬವರು ಸೆ.2ರಂದು ರಾತ್ರಿ ತನ್ನ ಹೆಂಡತಿಯೊಂದಿಗೆ ಫೋನಿನಲ್ಲಿ ಜಗಳ ಮಾಡಿಕೊಂಡ ವಿಚಾರದಲ್ಲಿ ಮನ ನೊಂದು ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೂರಾಳ್‌ಬೆಟ್ಟು ಗ್ರಾಮದ ಪುಂಜಾಜೆ ಎಂಬಲ್ಲಿ ಬಾಳಪ್ಪ(56) ಎಂಬವರು ಮದ್ಯ ಸೇವನೆ ಚಟದಿಂದ ಮಾನಸಿಕವಾಗಿ ನೊಂದು ಸೆ.2ರಂದು ರಾತ್ರಿ ವೇಳೆ ಶೆಡ್ಡಿನ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಕಳದ ಸದಾನಂದ ಎಂಬವರ ಪತ್ನಿ ಪ್ರತೀಮಾ(53) ಎಂಬವರು ಮಾನಸಿಕ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸೆ.2ರಂದು ಬೆಳಗ್ಗೆ ಮನೆಯ ಎದುರುಗಡೆ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊರ್ಗಿ ಗ್ರಾಮದ ಲಕ್ಷ್ಮೀ(42) ಎಂಬವರು ಜಾಂಡೀಸ್ ಕಾಯಿಲೆ ಯಿಂದ ಮನನೊಂದು ಸೆ.2ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಲ್‌ನ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.