ಆ.20ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಾರಂಭ
ಉಡುಪಿ, ಆ.14: ಭಾರತ ಚುನಾವಣಾ ಆಯೋಗವು ಅರ್ಹತಾ ದಿನಾಂಕ: 01.01.2025ರಂತೆ ಭಾವಚಿತ್ರ ಸಹಿತ ಮತದಾರರ ಪಟ್ಟಿಗಳ ಪರಿಷ್ಕರಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಪರಿಷ್ಕರಣೆ ಪೂರ್ವ ಚಟುವಟಿಕೆಗಳ ಸಮಯದಲ್ಲಿ ರಾಜ್ಯದ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿ, ಹೆಸರು ನೊಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ 18 ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿಗಳನ್ನು ಸಲ್ಲಿಸಬಹುದು.
ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ವಿಶೇಷ ಅಭಿಯಾನ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಸಾರ್ವಜನಿಕರು ವಿಶೇಷ ಅಭಿಯಾನ ಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಹಾಗೂ ಅವಶ್ಯವಿರುವ ತಿದ್ದುಪಡಿ, ಸೇರ್ಪಡೆ ಹಾಗೂ ತೆಗೆದು ಹಾಕುವಿಕೆಗೆ ಅರ್ಜಿಗಳನ್ನು ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿಗಳು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕರು ಅರ್ಜಿ ನಮೂನೆ 6 ಮತ್ತು 8ನ್ನು ಸಲ್ಲಿಸುವಾಗ ಸ್ವಯಂಪ್ರೇರಿತವಾಗಿ ಆಧಾರ್ ಸಂಖ್ಯೆಗಳನ್ನು ಒದಗಿಸ ಬಹುದು. ಎಲ್ಲಾ ರೀತಿಯ ಚುಣಾವಣಾ ಸಂಬಂಧಿತ ಸೇವೆಗಳಿಗಾಗಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ನಲ್ಲಿ ವೋಟರ್ಸ್ ಹೆಲ್ಘ್ಲೈನ್ ಅಫ್ಲಿಕೇಷನ್ ಮೂಲಕ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆ.20ರ ಮಂಗಳವಾರದಿಂದ ಅ.18ರ ಶುಕ್ರವಾರದವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮತಗಟ್ಟೆಗಳ ತರ್ಕಬದ್ಧಗೊಳಿಸುಕೆ/ಮರು ಹೊಂದಾಣಿಕೆ ಸೇರಿದಂತೆ ಮತದಾರರ ಪಟ್ಟಿ/ಮತದಾರರ ಗುರುತಿನ ಚೀಟಿಗಳಲ್ಲಿನ ಲೋಪದೋಷಗಳನ್ನು ತೆಗೆದುಹಾಕುವುದು. ಅಗತ್ಯವಿರುವ ಕಡೆ ಮತದಾರರ ಪಟ್ಟಿಯಲ್ಲಿನ ಗುಣಮಟ್ಟವಿಲ್ಲದ ಭಾವಚಿತ್ರಗಳನ್ನು ಬದಲಾಯಿಸಿ ಉತ್ತಮ ಗುಣಮಟ್ಟದ ಭಾವಚಿತ್ರಗಳನ್ನು ಖಾತ್ರಿಪಡಿಸುವುದು. ವಿಭಾಗ/ಭಾಗಗಳ ಮರುಹೊಂದಾಣಿಕೆ ಹಾಗೂ ಪ್ರಸ್ತಾಪಿತ ವಿಭಾಗ/ಭಾಗಗಳ ಮತಗಟ್ಟೆಗಳ ಸ್ಥಳ ವನ್ನು ಅಂತಿಮಗೊಳಿಸುಕೆ ಮತ್ತು ಮತಗಟ್ಟೆಗಳ ಪಟ್ಟಿಗಳಿಗೆ ಅನುಮೋದನೆ ಪಡೆದುಕೊಳ್ಳುವುದು. ನ್ಯೂನತೆಗಳ ಗುರುತಿ ಸುವಿಕೆ ಮತ್ತು ಅಂತಹ ನ್ಯೂನತೆ ಗಳನ್ನು ನಿವಾರಿಸಲು ಕಾರ್ಯತಂತ್ರ ಮತ್ತು ಕಾಲಾವಧಿಯನ್ನು ಅಂತಿಮ ಗೊಳಿಸುವುದು ಮತ್ತು ನಿಯಂತ್ರಣ ಕೋಷ್ಟಕದ ನವೀಕರಣ ನಡೆಯಲಿದೆ.
ಅಕ್ಟೋಬರ್ 19 ಶನಿವಾರದಿಂದ ಅ.28ರ ಸೋಮವಾರದವರೆಗೆ ನಮೂನೆ 1ರಿಂದ 8ರ ತಯಾರಿ ಹಾಗೂ ಅರ್ಹತಾ ದಿನಾಂಕ 2025ರ ಜನವರಿ 1ರಂತೆ ಸಮಗ್ರ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.
ಅ.24 ಮಂಗಳವಾರ ಸಮಗ್ರ ಕರಡು ಮತದಾರರ ಪಟ್ಟಿಯ ಪ್ರಕಟಣೆ, ಸಾರ್ವಜನಿಕರು ತಮ್ಮ ಲೋಪದೋಷಗಳ ಕುರಿತು ಅ.29ರ ಮಂಗಳವಾರ ದಿಂದ ನವೆಂಬರ್ 28ಗುರುವಾರದವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಕಾಶ ಇರುತ್ತದೆ.
ಹಕ್ಕುಗಳು ಮತ್ತು ಆಕ್ಷೇಪಣೆಯ ಅವಧಿಯಲ್ಲಿ ಮುಖ್ಯ ಚುನಾವನಾಧಿಕಾರಿ ಗಳು ನಿಗದಿಪಡಿಸುವ ಶನಿವಾರ ಮತ್ತು ಭಾನುವಾರಗಳಂದು ವಿಶೇಷ ಅಭಿಯಾನದ ದಿನಾಂಕಗಳನ್ನು ಶೀಘ್ರದಲ್ಲಿ ಗೊತ್ತುಪಡಿಸಲಾಗುವುದು.
ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿಯನ್ನು ಡಿ.24ರ ಮಂಗಳವಾರ ದೊಳಗೆ ಮುಗಿಸಲಾಗುವುದು. 2025ರ ಜ.1ರ ಬುಧವಾರದೊಳಗೆ ಮತದಾರರ ಪಟ್ಟಿಗಳ ಗುಣಮಟ್ಟ ಪರಿಶೀಲನೆ ಮಾಡಲಾಗುವುದು. ಹಾಗೂ ಅಂತಿಮ ಪಟ್ಟಿಯ ಪ್ರಕಟಣೆಗಾಗಿ ಆಯೋಗದ ಅನುಮತಿ ಕೋರಿ ದತ್ತಾಂಶ ವನ್ನು ನವೀಕರಿಸಲಾಗುವುದು. 2025ರ ಜನವರಿ 6ರ ಸೋಮವಾರ ದಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.