ಎಸೆಸೆಲ್ಸಿ ಪರೀಕ್ಷೆ: ಕಾರ್ಕಳದ ಕೆಎಂಇಎಸ್ ಶಿಕ್ಷಣ ಸಂಸ್ಥೆಗೆ ಶೇ.100 ಫಲಿತಾಂಶ
ಐಫಾ ನಿದಾ, ಮೋಹಿತ್ ಶೆಣೈ, ನವೀನ್ ನಾಯಕ್, ಸಮೀಕ್ಷಾ ಮೊಯ್ಲಿ, ಸಿಂಚನ
ಕಾರ್ಕಳ , ಮೇ 13: ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಪ್ರತಿಷ್ಠಿತ ಕುಕ್ಕುಂದೂರು ಕೆಎಂಇಎಸ್ ಶಿಕ್ಷಣ ಸಂಸ್ಥೆ 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸುವ ಮೂಲಕ ವಿಶೇಷ ಸಾಧನೆ ಮಾಡಿದೆ.
ಪರೀಕ್ಷೆ ಬರೆದ ಒಟ್ಟು 59 ವಿದ್ಯಾರ್ಥಿಗಳ ಪೈಕಿ 23 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 33 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಮೂರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
625ರಲ್ಲಿ 616 (ಶೇ.98.56) ಅಂಕ ಪಡೆದ ವಿದ್ಯಾರ್ಥಿನಿ ಐಫಾ ನಿದಾ ರಾಜ್ಯಕ್ಕೆ 10 ನೇ ಸ್ಥಾನಿ ಹಾಗೂ ಶಾಲೆಗೆ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿದ್ದಾರೆ.
ಮೋಹಿತ್ ಶೆಣೈ 613 (ಶೇ.98.08), ನವೀನ್ ಬಿ.ನಾಯಕ್ 609 (ಶೇ.97.44), ಸಮೀಕ್ಷಾ ಮೊಯ್ಲಿ 603 (ಶೇ.96.48), ಸಿಂಚನ 602 (ಶೇ.96.32), ಶ್ರಾವ್ಯ 597(ಶೇ.95.52) ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ವೀರಣ್ಣ ಗೌಡ 585(ಶೇ.93.6), ದೀಪಕ್ 581(ಶೇ.92.96), ದೀಕ್ಷಾ 580(ಶೇ.92.8), ನಿಶ್ಮಾ 578(ಶೇ.92.48), ಯಶಸ್ವಿನಿ 573(ಶೇ.91.68), ಹರ್ಷಿತಾ 573(ಶೇ.91.68), ಅದ್ವಿತ್ ಹೆಗ್ಡೆ 567(ಶೇ.90.72), ಅತ್ಮೀಕಾ 565(ಶೇ.90.4), ಜಾಯ್ ಶರೋನ್ 564(ಶೇ.90.4) ಅಂಕ ಪಡೆದಿದ್ದಾರೆ. ಶೇ.100 ಫಲಿತಾಂಶ ಪಡೆಯಲು ಕಾರಣರಾದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲಾ ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರ್ ಅವರನ್ನು ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಇಮ್ತಿಯಾಝ್ ಅಹ್ಮದ್ ಅಭಿನಂದಿಸಿದ್ದಾರೆ.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ 41ವರ್ಷಗಳ ಹಿಂದೆ ಕುಕ್ಕುಂದೂರು ಕೆಎಂಇಎಸ್ ಶಿಕ್ಷಣ ಸಂಸ್ಥೆ ಯನ್ನು ಸ್ಥಾಪಿಸಲಾಗಿತ್ತು. ಸ್ಥಾಪಕಾಧ್ಯಕ್ಷರಾಗಿ ದಿವಂಗತ ಪಿ.ಎಂ.ಖಾನ್, ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ರಶೀದ್ ಹೈದರ್, ಸ್ಥಾಪಕ ಕೋಶಾಧಿಕಾರಿ ಯಾಗಿ ನಝೀರ್ ಹುಸೇನ್ ಕಾರ್ಯನಿರ್ವಹಿಸಿದ್ದರು.
ಪ್ರಸ್ತುತ ದಕ್ಷಿಣ ಕನ್ನಡ ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕೆ.ಎಸ್.ಮುಹಮ್ಮದ್ ಮಸೂದ್ ಗೌರವಾಧ್ಯಕ್ಷರಾಗಿದ್ದು, ಇಡೀ ಸಂಸ್ಥೆಯ ಬೆನ್ನೆಲುಬಾಗಿ ಸಲಹೆಗಾರರಾದ ಅನಿವಾಸಿ ಭಾರತೀಯ ಉದ್ಯಮಿ ಕೆ.ಎಸ್.ಹಾಜಿ ನಿಸಾರ್ ಅಹ್ಮದ್ ಸಂಸ್ಥೆಯ ಬೆಳವಣಿಗೆಗೆ ತುಂಬು ಪ್ರೋತ್ಸಾಹ ನೀಡಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ.
ನರ್ಸರಿಯಿಂದ ಪಿಯುಸಿವರೆಗಿನ ಶಿಕ್ಷಣ ನೀಡುವ ನಮ್ಮ ಸಂಸ್ಥೆಯು ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದೆ. ಇಲ್ಲಿ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಇಮ್ತಿಯಾಝ್ ಅಹ್ಮದ್ ತಿಳಿಸಿದ್ದಾರೆ.