ಸ್ಥಬ್ಧ ಚಿತ್ರ ಮೆರವಣಿಗೆ: ಅರಣ್ಯ ಇಲಾಖೆಗೆ ಪ್ರಥಮ ಬಹುಮಾನ
ಉಡುಪಿ: ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿಯ ವತಿಯಿಂದ ಇಂದು ನಡೆದ 68ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ ಸ್ಥಬ್ದಚಿತ್ರ ಗಳಲ್ಲಿ ಕರ್ನಾಟಕ ರಾಜ್ಯದ ಅರಣ್ಯ ಇಲಾಖೆ ಪ್ರಥಮ ಸ್ಥಾನ ಹಾಗೂ ಕೃಷಿ ಇಲಾಖೆ ದ್ವಿತೀಯ ಸ್ಥಾನ ಪಡೆದಿವೆ.
ಮೆರವಣಿಗೆಯಲ್ಲಿ ಭಾಗವಹಿಸಿದ ಕಾಲೇಜು ವಿದ್ಯಾರ್ಥಿಗಳ ತಂಡದಲ್ಲಿ ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ, ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆ ಎರಡನೇ ಸ್ಥಾನ ಮತ್ತು ಉಡುಪಿಯ ಸರಕಾರಿ ಪ್ರೌಢಶಾಲೆ (ಬೋರ್ಡ್ ಹೈಸ್ಕೂಲ್) ತೃತೀಯ ಸ್ಥಾನ ಪಡೆದವು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಥ ಸಂಚಲನದಲ್ಲಿ ವಿವಿಧ ಇಲಾಖೆಗಳು ಹಾಗೂ ಶಾಲಾ-ಕಾಲೇಜುಗಳ ೧೪ ತುಕಡಿಗಳು ಭಾಗವಹಿಸಿದ್ದು, ಕಾಲೇಜು ವಿಭಾಗದ ಪೂರ್ಣಪ್ರಜ್ಞ ಕಾಲೇಜು ಎನ್‌ಸಿಸಿ ಮೊದಲನೇ ಸ್ಥಾನ, ಎಂಜಿಎಂ ಕಾಲೇಜಿನ ಎನ್‌ಸಿಸಿ ಎರಡನೇ ಸ್ಥಾನ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಎನ್‌ಸಿಸಿ ಆರ್ಮಿ ವಿಭಾಗ ಮೂರನೇ ಸ್ಥಾನ ಗೆದ್ದುಕೊಂಡವವು.
ಪ್ರಾಥಮಿಕ ಹೈಸ್ಕೂಲ್ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಂತೆಕಟ್ಟೆ ಕಳತ್ತೂರು ಪ್ರಥಮ ಸ್ಥಾನ, ಸರಕಾರಿ ಪ್ರೌಢಶಾಲೆ ಆವರ್ಸೆ ಎರಡನೇ ಸ್ಥಾನ, ಸೈಂಟ್ ಸಿಸಿಲೀಸ್ ಪ್ರೌಢಶಾಲೆ ಉಡುಪಿ ಮೂರನೇ ಸ್ಥಾನ ಪಡೆದಿವೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆ ಒಳಕಾಡು ಮೊದಲನೇ ಸ್ಥಾನ ಹಾಗೂ ನಾರಾಯಣ ಗುರು ಆಂಗ್ಲಮಾಧ್ಯಮ ಶಾಲೆ ಎರಡನೇ ಸ್ಥಾನ ತಮ್ಮದಾಗಿಸಿಕೊಂಡಿವೆ.