ಯಶಸ್ಸು ಎನ್ನುವುದು ನಿರಂತರ ಪ್ರಕ್ರಿಯೆ: ಡಾ.ಯಂಡಮೂರಿ ವೀರೇಂದ್ರನಾಥ್
ಕುಂದಾಪುರ, ಅ.30: ಯಶಸ್ಸು ಎನ್ನುವುದು ನಿರಂತರ ಪ್ರಕ್ರಿಯೆ. ಅನೇಕ ಬಾರಿ ನಾವು ನಮ್ಮ ಪೂರ್ಣಶಕ್ತಿಯನ್ನು ಬಳಸಿಕೊ ಳ್ಳುವಲ್ಲಿ ವಿಫಲರಾಗುತ್ತೇವೆ. ಯಾವುದೇ ಕಾಲದಲ್ಲೂ ಬದುಕಿನಲ್ಲಿ ಉತ್ಸಾಹ ಕಳೆದುಕೊಳ್ಳಬೇಡಿ. ವಿದ್ಯಾರ್ಥಿಗಳಲ್ಲಿರುವ ಭಯ ಹೋಗಲಾಡಿಸಬೇಕು. ನಾನು ಸರಿ ಇಲ್ಲ ಬೇರೆಲ್ಲರೂ ಸರಿ ಇದ್ದಾರೆ ಎಂದು ಭಾವಿಸುವ ವಯಸ್ಸಿನಲ್ಲಿ ಯಶಸ್ಸಿನ ಕಿಡಿ ನಮ್ಮೊ ಳಗೆ ಹತ್ತಿಕೊಳ್ಳಬೇಕು. ಆಗ ಕೀಳರಿಮೆಯಿಂದ ಹೊರಬರಬಹುದು ಎಂದು ಕಾದಂಬರಿಕಾರ, ಭಾಷಣಕಾರ ಡಾ.ಯಂಡಮೂರಿ ವೀರೇಂದ್ರನಾಥ್ ಹೇಳಿದ್ದಾರೆ.
ಕುಂದಾಪುರ ಎಚ್‌ಎಂಎಂ ವಿಕೆಆರ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ಹೃದಯ ಮಾಡು ಎನ್ನುವಾಗ ಮೆದುಳು ಬೆಡ ಎನ್ನುವುದನ್ನು ನಿಯಂತ್ರಿಸ ಬಲ್ಲವ ನಿರ್ವಾಣ ಯೋಗಿಯಾಗುತ್ತಾನೆ. ಇದಕ್ಕಾಗಿ ಸಾಧನೆ ಅಗತ್ಯ. ತಿನ್ನುವುದು, ಟಿವಿ ವೀಕ್ಷಣೆ, ಮಾತಾಡುವುದು, ಕೇಳುವುದು ಅನಗತ್ಯವಿಲ್ಲದೇ ಮಿತವಾಗಿದ್ದಾಗ ಇಂತಹ ನಿರ್ವಾಣ ಸ್ಥಿತಿ ತಲುಪಬಹುದು ಎಂದರು.
ಕೈಬರಹ ಪರಿಣತ ವೈ. ಮಲ್ಲಿಕಾರ್ಜುನ ರಾವ್, ಕುಂದಾಪುರ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕ ತ್ತಾಯ ಮಾತನಾಡಿದರು. ಮುಖ್ಯೋಪಾಧ್ಯಾಯ ಜಗದೀಶ್ ಆಚಾರ್ ಸಾಸ್ತಾನ, ಮುಖ್ಯ ಶಿಕ್ಷಕಿ ಶುಭಾ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ಚಿಂತನಾ ರಾಜೇಶ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ಪಂದನಾ, ಬ್ರಾಹ್ಮಿ ಕಾರ್ಯಕ್ರಮ ನಿರ್ವಹಿಸಿದರು.