ಸಂಶಯಾಸ್ಪದ ಸಾವು: ಪ್ರಕರಣ ದಾಖಲು
ಉಡುಪಿ, ಸೆ.24: ಉಡುಪಿಯಲ್ಲಿ ಪೈಬರ್ ಡೋರ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಸಂಶಯಾಸ್ಪದವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಮನು(34) ಎಂದು ಗುರುತಿಸಲಾಗಿದೆ. ಸೆ.22ರಂದು ಸಂಜೆ ಅಸ್ವಸ್ಥಗೊಂಡ ಇವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಾತ್ರಿ 10 ಗಂಟೆಗೆ ಸುಮಾರಿಗೆ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಇವರು ಅನಾರೋಗ್ಯದಿಂದ ಅಥಾವ ಇನ್ಯಾವುದೋ ಸಮಸ್ಯೆಯಿಂದ ಮೃತಪಟ್ಟಿರಬಹುದು. ಆದರೆ ಮೃತರ ಮರಣದಲ್ಲಿ ಸಂಶಯವಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮೃತರ ಸಹೋದರ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story