ಮದುವೆ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು
ಕುಂದಾಪುರ, ಆ.31: ಮದುವೆ ಮನೆಯಲ್ಲಿ ಇಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ಕಲ್ಕಂಬ ಎಂಬಲ್ಲಿ ನಡೆದಿದೆ.
ಸಿದ್ದಾಪುರ ಗ್ರಾಮದ ಕಡ್ರಿ ರಸ್ತೆಯ ಮರಿಯಮ್ ಶಹರೀನ್(26) ಎಂಬವರು ಕಲ್ಕಂಬ ಎಂಬಲ್ಲಿರುವ ತನ್ನ ಮಾವ ಮನೆಗೆ ಗೃಹ ಪ್ರವೇಶ ಹಾಗೂ ಮದುವೆ ಕಾರ್ಯಕ್ರಮದ ಬಗ್ಗೆ ಕುಟುಂಬ ಸಮೇತರಾಗಿ ಬಂದಿದ್ದು, ಆ.26ರಂದು ಕಾರ್ಯಕ್ರಮವನ್ನು ಮುಗಿಸಿ ಸಂಜೆ ಚಿನ್ನಾಭರಣಗಳನ್ನು ಸೂಟ್ಕೇಸ್ನಲ್ಲಿ ಇಟ್ಟಿದ್ದರು.
ಆ.27ರಂದು ಸಂಜೆ ಸೂಟ್ ಕೇಸ್ ತೆರದು ನೋಡಿದಾಗ ಅದರಲ್ಲಿಟ್ಟಿದ್ದ 100 ಗ್ರಾಂ ತೂಕದ ಮೂರು ಚಿನ್ನದ ಬಳೆಗಳು ಕಳವಾಗಿರುವ ಬಗ್ಗೆ ದೂರಲಾಗಿದೆ. ಕಳವು ಮಾಡಿರುವುದಾಗಿದೆ. ಕಳವಾದ ಚಿನ್ನಾಭರಣಗಳ ಮೌಲ್ಯ 4,80,000ರೂ. ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story