ಕುಂದಾಪುರ ಭಂಡಾರ್‌ಕಾರ್ಸ್ ಕ್ಯಾಂಪಸ್‌ನಲ್ಲಿ ಹುಲಿ ಕುಣಿತ
ಕುಂದಾಪುರ, ಅ.20: ಜೆಸಿಐ ಕುಂದಾಪುರ ಸಿಟಿ ನೇತೃತ್ವದಲ್ಲಿ ರೋಟರಿ ಕ್ಲಬ್ ಕುಂದಾಪುರ, ಕಿಯೋನಿಕ್ಸ್ ಸಂಸ್ಥೆ ಕುಂದಾಪುರ ಸಹಯೋಗದಲ್ಲಿ ನವರಾತ್ರಿ ಪ್ರಯುಕ್ತ ಭಂಡಾರ್‌ಕಾರ್ಸ್ ಕಾಲೇಜು ಕ್ಯಾಂಪಸ್‌ನಲ್ಲಿ ಹುಲಿ ಕುಣಿತವನ್ನು ಆಯೋಜಿಸಲಾಗಿತ್ತು.
ಕುಂದಾಪುರ ಟಿಟಿ ರಸ್ತೆಯ ನಿವಾಸಿ ಚರಣ್ ನೇತೃತ್ವದ ಟಿ.ಟಿ.ಟೈಗರ್ಸ್ ಕುಂದಾಪುರ ತಂಡವು ಹುಲಿ ವೇಷ ಧರಿಸಿ, ಸುಮಾರು ಒಂದು ಗಂಟೆಗಳ ಕಾಲ ಹೆಜ್ಜೆ ಹಾಕಿದ್ದು ಕಾಲೇಜಿನ ಸಾವಿರಾರು ಮಂದಿ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬಂದಿಯನ್ನು ರಂಜಿಸಿದರು.
ಹುಲಿ ಕುಣಿತಕ್ಕೆ ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ಶಾಂತರಾಮ ಪ್ರಭು ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರ್ಯ ಮಾತನಾಡಿ, ನವರಾತ್ರಿಯ ವೇಳೆ ಹುಲಿ ಕುಣಿತಕ್ಕೆ ವಿಶೇಷ ಮಹತ್ವವಿದೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಮಾತನಾಡಿ ದರು. ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷೆ ಡಾ.ಸೋನಿ ಡಿಕೊಸ್ಟಾ, ನಿಯೋಜಿತ ಅಧ್ಯಕ್ಷ ರಾಘವೇಂದ್ರ ಕುಲಾಲ್, ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ, ಕಿಯೋನಿಕ್ಸ್ನ ರಜ್ ಹೆಜಮಾಡಿ, ಭಂಡಾರ್‌ಕಾರ್ಸ್ಷ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಸತ್ಯನಾರಾಯಣ, ಐಕ್ಯೂಎಸಿ ಸಂಯೋಜಕ ಡಾ.ವಿಜಯ ಕುಮಾರ ಕೆ.ಎಂ. ಉಪಸ್ಥಿತರಿದ್ದರು.