ಹಿರಿಯಡ್ಕದಲ್ಲಿ ಸುಂಟರಗಾಳಿ: ಮರ ಬಿದ್ದು ಮನೆ, ಎರಡು ರಿಕ್ಷಾಗಳಿಗೆ ಹಾನಿ
ಉಡುಪಿ, ಜು.26: ಹಿರಿಯಡ್ಕ ಸಮೀಪ ಕುಕ್ಕೆಹಳ್ಳಿ ಬಜೆ ಬಳಿ ಶುಕ್ರವಾರ ನಸುಕಿನ ವೇಳೆ 2 ಗಂಟೆ ಸುಮಾರಿಗೆ ಬೀಸಿದ ಸುಂಟರಗಾಳಿಗೆ ತೆಂಗಿನಮರ ಬಿದ್ದು ಮನೆ ಹಾಗೂ ಎರಡು ರಿಕ್ಷಾಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವುದು ವರದಿಯಾಗಿದೆ.
ಭಾರೀ ಗಾಳಿಮಳೆಗೆ ಬಜೆಯ ಅಮ್ಮಣ್ಣಿ ಸೇರಿಗಾರ್ತಿ ಎಂಬವರ ಮನೆ ಸಮೀಪದ ತೆಂಗಿನಮರ ಬಿದ್ದು ಮನೆ ಹಾನಿಯಾಗಿದ್ದು, ಮನೆ ಬಳಿ ನಿಲ್ಲಿಸಿದ್ದ ಅಮ್ಮಣಿಯವರ ಮಕ್ಕಳಾದ ಗಣಪತಿ ಸೇರಿಗಾರ ಹಾಗೂ ರವಿ ಸೇರಿಗಾರ ಎಂಬವರ ಆಟೋ ರಿಕ್ಷಾಗಳು ಸಂಪೂರ್ಣ ಜಖಂಗೊಂಡಿವೆ ಎಂದು ತಿಳಿದು ಬಂದಿದೆ. ಇದರಿಂದ ಲಕ್ಷಾಂತರ ನಷ್ಟ ರೂ. ಉಂಟಾಗಿದೆ.
Next Story