ಉಡುಪಿ ಜಿಲ್ಲೆಯ ಸರಕಾರಿ ವೈದ್ಯಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ
ಮಣಿಪಾಲ, ಅ.20: ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಮು ದಾಯ ವೈದ್ಯಕಿಯ ವಿಭಾಗ ಮತ್ತು ಉಡುಪಿ ಜಿಲ್ಲಾ ರೋಗ ಸರ್ವಕ್ಷಣಾಧಿಕಾರಿ ಗಳ ಕಚೇರಿಯ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಹಾಗೂ ಶುಶೂಷಣಾ ಅಧಿಕಾರಿಗಳಿಗೆ ಸಾಮಾನ್ಯ ರೋಗಗಳ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರವನ್ನು ಕಾಲೇಜಿನ ಇಂಟಾರಾಕ್ಟ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ಅಸಾಂಕ್ರಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಅಸ್ತಮಾ, ಕ್ಯಾನ್ಸರ್, ಉಪಶಮನ ಚಿಕಿತ್ಸೆಗಳ ತಪಾಸಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹೃದಯ ರೋಗಗಳ ವಿಭಾಗದ ಮುಖ್ಯಸ್ಥ ಡಾ.ಪದ್ಮಾ ಕುಮಾರ್, ಹೃದಯ ರೋಗಗಳ, ರಕ್ತದೊತ್ತಡದ ಶೀಘ್ರ ಪತ್ತೆ, ನಿಯಂತ್ರಣ, ನಿರಂತರ ಪರಿಶಿಲನೆಯ ಅಗ ತ್ಯತೆ ಹಾಗೂ ಸಮುದಾಯದಲ್ಲಿ ಹೆಚ್ಚುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಖಾಯಿಲೆಗಳ ಸರಿಯಾದ ನಿರ್ವಹಣೆ ಬಗ್ಗೆ ವಿವರಿಸಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ ತಾಲೂಕು ಆರೋಗ್ಯ ಅಧಿಕಾರಿ ಡಾ.ವಾಸುದೇವ ಉಪಾದ್ಯಾಯ, ಸಮುದಾಯದಲ್ಲಿ ವಿವಿಧ ಖಾಯಿಲೆಗಳ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿ ಅವುಗಳನ್ನು ನಿರ್ವಹಿಸಲು ಇರುವ ಕಾರ್ಯ ಕ್ರಮಗಳ ಮಾಹಿತಿ ನೀಡಿದರು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್, ವೈದ್ಯಕೀಯ ಶಿಕ್ಷಣ, ನಿರಂತರವಾಗಿ ಬದಲಾಗುತ್ತಿರುವ ವೈದ್ಯಕೀಯ ವಿಜ್ಞಾನದ ಹಿನ್ನೆಲೆಯಲ್ಲಿ ಹಾಗೂ ಕೌಶಲ್ಯ ಗುಣಮಟ್ಟದ ನವೀಕರಣದ ಅಗತ್ಯತೆ ಬಗ್ಗೆ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಶಶಿಕಿರಣ್, ರಕ್ತದೊತ್ತಡ ಹಾಗೂ ಮಧು ಮೇಹ, ಡಾ.ಮನು ಮೋಹನ್ ಅಸ್ತಮಾ ಹಾಗೂ ಇತರ ಶ್ವಾಸಕೋಶ ಸಂಬಂಧಿ ರೋಗಗಳು, ಡಾ.ರೀನಾ ಔಷಧಗಳ ಸುರಕ್ಷತ ಹಾಗೂ ಸರಿಯಾದ ಬಳಕೆ, ಡಾ. ಕೃತಿಕಾ ಉಪದ್ಮನ ಚಿಕಿತ್ಸೆಗಳ ಅಗತ್ಯತೆ ಹಾಗೂ ಕ್ರಮಗಳು, ಡಾ.ವಿಜೇತಾ ಪ್ರಯೋಗಾಲಯ ಪರೀಕ್ಷೆಗಳ ಸುರಕ್ಷತೆ, ಡಾ. ರಾಜೇಶ್ ಕೃಷ್ಣ ಮಾನಸಿಕ ರೋಗಗಳು, ಡಾ.ಸಿದ್ದಿ ಪ್ರಭಾ ಫಿಸಿಯೋಥೆರಪಿ ಅಗತ್ಯತೆಗಳು, ಡಾ.ಸ್ನೇಹಾ, ಡಾ.ಈಶ್ವರಿ, ಡಾ.ಅಖಿಲಾ, ಡಾ.ಅಪ್ರೋಜ್ ವಿವಿಧ ಕ್ಯಾನ್ಸರ್ ರೋಗಗಳ ಶೀಘ್ರ ಪತ್ತೆ ಹಾಗೂ ಪರೀಕ್ಷೆಗಳ ಬಗ್ಗೆ ವಿವರಣೆ ನೀಡಿದರು.
ಡಾ.ರತ್ನಾ ಹಾಗೂ ಡಾ.ಅಂಜಲಿ ಕಾರ್ಯಕ್ರಮ ನಿರೂಪಿಸಿದರು. ಡಾ. ಮುರಳಿಧರ್ ಕುಲಕರ್ಣೆ ವಂದಿಸಿದರು. ಕಾರ್ಯಗಾರದಲ್ಲಿ 80 ವೈದ್ಯಾಧಿಕಾರಿ ಗಳು ಹಾಗು 85 ಶುಶೂಷಣಾ ಅಧಿಕಾರಿಗಳು ಭಾಗವಹಿಸಿದ್ದರು.