ಹಿರಿಯ ಛಾಯಾಚಿತ್ರಗ್ರಾಹಕ ದೇವದಾಸ್ ಕಾಮತ್‌ಗೆ ಗೌರವ
ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಉಡುಪಿ ವಲಯದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ ಹಿರಿಯ ಛಾಯಾಚಿತ್ರ ಕಲಾವಿದ ದೇವದಾಸ್ ಕಾಮತ್ ಅವರಿಗೆ ಸೋಮವಾರ ಗೌರವ ಅಭಿನಂದನೆ ಸಲ್ಲಿಸ ಲಾಯಿತು.
ಎಸ್‌ಕೆಪಿಎ ಉಡುಪಿ ವಲಯದ ಅಧ್ಯಕ್ಷ ಸುಧೀರ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಜನಾರ್ದನ್ ಕೊಡವೂರು, ಮಾಜಿ ಅಧ್ಯಕ್ಷ ಸುಕುಮಾರ್ ಕುಕ್ಕಿಕಟ್ಟೆ, ಭಾಸ್ಕರ್ ಉದ್ಯಾವರ, ಅನೀಶ್ ಶೆಟ್ಟಿಗಾರ, ಸಮಿತಿಯ ಸದಸ್ಯರಾದ ಪ್ರವೀಣ್ ಕೊರೆಯ, ಉದಯ ನಾಯ್ಕ್, ಪ್ರಕಾಶ್, ಪ್ರಸಾದ್ ಜತ್ತನ್, ಅಶೋಕ್, ಸತೀಶ್, ರಮೇಶ್, ಚಂದ್ರಕಲಾ ಕಾಮತ್ ಹಾಗೂ ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು, ಛಾಯಾಗ್ರಾಹಕರು ಉಪಸ್ಥರಿದ್ದರು.
Next Story