ಉಡುಪಿ: ಶ್ರೀರಾಮಸೇನೆಯಿಂದ ವಿವಾಹ ನೋಂದಣಾಧಿಕಾರಿಗೆ ಮನವಿ
ಉಡುಪಿ: ಅಂತರ್ ಧರ್ಮೀಯ ವಿವಾಹವು ಕೆಲವು ವಿವಾಹ ನೋಂದಣಿ ಕಚೇರಿಗಳಲ್ಲಿ ಸರಿಯಾದ ಕ್ರಮದಲ್ಲಿ ದಾಖಲೆ ಪರಿಶೀಲಿಸದೇ, ನೋಟೀಸ್ ಬೋರ್ಡ್‌ಗೆ ಪ್ರತಿ ಹಾಕದೇ ವಿವಾಹ ಮಾಡುವ ಬಗ್ಗೆ ದೂರುಗಳಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ವಿವಾಹ ನೋಂದಣಿ ಕಚೇರಿಯಲ್ಲಿ ಮತಾಂತರ ತಡೆ-2022 ಆಕ್ಟ್ ಸೇರಿದಂತೆ ಯಾವುದೇ ಕಾನೂನಿನ ಲೋಪಗಳು ಜರುಗದಂತೆ ಜಾಗ್ರತೆ ವಹಿಸಿ ಕೋಮು ಸೂಕ್ಷ್ಮವಾದ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಆಗ್ರಹಿಸಿ ಜಿಲ್ಲಾ ಹಿರಿಯ ವಿವಾಹ ನೋಂದಣಾಧಿಕಾರಿ ಪಣೀಂದ್ರರಿಗೆ ಇಂದು ಉಡುಪಿ ಜಿಲ್ಲಾ ಶ್ರೀರಾಮಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ಜಿಲ್ಲಾ ವಕ್ತಾರ ಶರತ್ ಮಣಿಪಾಲ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಕಪ್ಪೆಟ್ಟು, ಕಾರ್ಯದರ್ಶಿ ವಿಕ್ರಂ ವಿ, ಜಿಲ್ಲಾ ಸಂಪರ್ಕ ಪ್ರಮುಖ್ ಸುಜಿತ್ ನಿಟ್ಟೂರು, ನಗರ ಅಧ್ಯಕ್ಷ ಸುದೀಪ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಶ್ರೀರಾಮ ಸೇನೆಯು ಹಿಂದೂ ಸಹೋದರಿಯರ ರಕ್ಷಣೆಗಾಗಿ ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ಸಂತ್ರಸ್ತರ ಧ್ವನಿಯಾಗಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಸಹಾಯ ವಾಣಿ ಉದ್ಘಾಟನೆ ಇದೇ ಮೇ 29ರಂದು ಹುಬ್ಬಳ್ಳಿ ಕೇಂದ್ರಿತವಾಗಿ ರಾಜ್ಯದ 6 ಕಡೆಗಳಲ್ಲಿ ನಡೆಯಲಿದೆ ಎಂದು ಜಯರಾಂ ಅಂಬೆಕಲ್ಲು ತಿಳಿಸಿದ್ದಾರೆ.