ಉಡುಪಿ: ಜಿಲ್ಲೆಯಾದ್ಯಂತ ದಟ್ಟ ಮಂಜು ಕವಿದ ವಾತಾವರಣ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಬೆಳಗಿನ ಜಾವ ದಟ್ಟ ಮಂಜು ಕವಿದ ವಾತಾವರಣ ಕಂಡು ಬಂತು. ಇದರಿಂದ ರಸ್ತೆಗಳು ಗೋಚರಿಸದೆ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
ನಸುಕಿನ ವೇಳೆಯಿಂದ ನಿರಂತರವಾಗಿ ಮಂಜಿನ ವಾತಾವರಣ ಮೂಡಿದ್ದು ಬೆಳಗಾದರೂ ಮಬ್ಬಿನ ವಾತಾವರಣ ಇಳಿಯಲಿಲ್ಲ. ಬೆಳಗ್ಗೆ 8 ಗಂಟೆಯವರೆಗೂ ದಟ್ಟ ಮೋಡ ಕವಿದ ವಾತಾವರಣ ಮುಂದುವರಿದಿತ್ತು
ಹೊಗೆಯಂತೆ ಎಲ್ಲೆಡೆಯೂ ಗೋಚರಿಸುತ್ತಿದ್ದ ವಾತಾವರಣದಿಂದ, ಬೆಳಗಿನ ವಾಯುವಿಹಾರಿಗಳಿಗೆ,ವಾಹನ ಸಂಚಾರರಿಗೆ ಹಾಗೂ ವ್ಯಾಪಾರಿಗಳು ಸಹಿತ ಅನೇಕರಿಗೆ ತೊಂದರೆಯುಂಟಾಯಿತು.
ರಸ್ತೆಗಳು ಸಂಪೂರ್ಣ ಮಬ್ಬಿನಿಂದ ಆವರಿಸಿರುವುದರಿಂದ ವಾಹನಗಳು ಹೆಡ್ ಲೈಟ್ ಹಾಕಿ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂತು . ಇದೇ ರೀತಿ ವಾತಾವರಣ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿಯೂ ಕೂಡ ಕಂಡುಬಂದಿತ್ತು.
Next Story