ಉಡುಪಿ: ಅ.10ರಂದು ನೇರ ಸಂದರ್ಶನ
ಉಡುಪಿ, ಅ.4: ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ನಮ್ಮ ಕ್ಲಿನಿಕ್ನಲ್ಲಿ ಖಾಲಿ ಇರುವ ಹೆರಿಗೆ ತಜ್ಞರು -03 ಹುದ್ದೆ (ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ), ವೈದ್ಯಾಧಿಕಾರಿಗಳು-05 ಹುದ್ದೆ (ಕುಂದಾಪುರದ ಟಿ.ಟಿ.ರೋಡ್ನ ನಮ್ಮ ಕ್ಲಿನಿಕ್ ಹಾಗೂ ಖಾರ್ವಿಕೇರಿ ನಮ್ಮ ಕ್ಲಿನಿಕ್, ಕಾರ್ಕಳ ಮರೀನಾಪುರದ ನಮ್ಮ ಕ್ಲಿನಿಕ್, ಕುಂದಾಪುರ ಹಾಗೂ ಕಾರ್ಕಳದ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಉಡುಪಿಯ ಜಿಲ್ಲಾ ಆಸ್ಪತ್ರೆ), ಆಡಿಯೋಮೆಟ್ರಿಕ್ ಅಸಿಸ್ಟೆಂಟ್ -01 ಹುದ್ದೆ, ಯಂಗ್ ಹಿಯರಿಂಗ್ ಇಂಪೈರಿಡ್ ಚಿಲ್ದ್ರನ್ ಇನ್ಸ್ಪೆಕ್ಟರ್ -01 ಹುದ್ದೆ (ಜಿಲ್ಲಾ ಆಸ್ಪತ್ರೆ) ಹಾಗೂ ಎಲ್.ಹೆಚ್.ವಿ.-01 (ಉಡುಪಿಯ ನಗರ ಆರೋಗ್ಯ ಕೇಂದ್ರ) ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆಸಕ್ತ ಅಭ್ಯರ್ಥಿಗಳಿಗೆ ಅಕ್ಟೋಬರ್ 10ರಂದು ಬೆಳಗ್ಗೆ 10:30ರಿಂದ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.
ಅಭ್ಯರ್ಥಿಗಳು ಶೈಕ್ಷಣಿಕ ಮೂಲ ದಾಖಲಾತಿಗಳೊಂದಿಗೆ ಸಂದರ್ಶನದಲ್ಲಿ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.