ಉಡುಪಿ: ಇಂದ್ರಾಳಿಯ 'ದಿ ಹೆರಿಟೇಜ್' ನಲ್ಲಿ ಸ್ವಾತಂತ್ರ್ಯ ದಿನಾಚರಣೆ
ಉಡುಪಿ: ಇಂದ್ರಾಳಿಯಲ್ಲಿರುವ "ದಿ ಹೆರಿಟೇಜ್ " ಸೊಸೈಟಿ ಯ ನಿವಾಸಿಗಳು ಪ್ರತೀ ವರ್ಷದಂತೆ ಈ ವರ್ಷವೂ 77ನೇ ಸ್ವಾತಂತ್ರೋತ್ಸವನ್ನು ವಿಜೃಂಭಣೆಯಿಂದ ಆಚರಿಸಿದರು.
ಉಡುಪಿ ಚೇಂಬರ್ ಆಫ್ ಕಾಮರ್ಸ್ ನ ಉಪಾಧ್ಯಕ್ಷರಾದ ನಟರಾಜ್ ಪ್ರಭು ಧ್ವಜಾರೋಹಣಗೈದರು. ಇಂದ್ರಾಳಿ ಮಸೀದಿಯ ಇಮಾಮ್ ಮಸಿಉಲ್ಲಾ ಖಾನ್ ಶುಭ ಸಂದೇಶ ನೀಡಿದರು.
ವಿಶೇಷವಾಗಿ, ಜಿಲ್ಲೆಯ ಹಿರಿಯ ಸಾಹಿತಿ, ಖ್ಯಾತ ಲೇಖಕರೂ, ಕವಿಗಳೂ ಆಗಿರುವ, ಅನೇಕ ಕಥೆ, ಕವನ, ಲಘು ಹಾಸ್ಯ ಬರಹಗಳನ್ನು ಸರಳ ಭಾಷೆಯಲ್ಲಿ ಬರೆದು , ಪುಸ್ತಕಗಳನ್ನು ಮುದ್ರಿಸಿ, ಜನಸಾಮಾನ್ಯರಿಗೆ ಉಚಿತವಾಗಿ ನೀಡುವ ಮೂಲಕ, ಸಾಹಿತ್ಯ ಸೇವೆಯನ್ನು ಮಾಡುತ್ತಿರುವ ಇಂದ್ರಾಳಿಯ ಶ್ರೀ ಗೋಪಾಲಕೃಷ್ಣ ಭಟ್ (ಕೂ.ಗೋ.)ಅವರನ್ನು ಸನ್ಮಾನಿಸಲಾಯಿತು.
ಮಣಿಪಾಲ ಠಾಣೆಯ ಪಿಎಸೈ ಶ್ರೀ ಸುಧಾಕರ್, ಎಂ ಎ ಡೆವಲಪರ್ ನ ಮಾಲೀಕರಾದ ಎಂ ಅನ್ಸಾರ್, ಉದ್ಯಮಿಗಳಾದ ಯಾಕೂಬ್ ಮಲ್ಪೆ, ಸುಹೇಲ್ ಮಲ್ಪೆ, ಮೊಹಸಿನ್ ಗೋವಾ, ಅಂಥೋನಿ ಲುವಿಸ್, ಟಿ. ಎಂ.ಟಿ. ಬಸ್ ನ ಮಾಲಕರಾದ ತಂವೀರ್, ಹೆರಿಟೇಜ್ ಸೊಸೈಟಿಯ ಅಧ್ಯಕ್ಷ ಮಂಜೂರ್ ಗಂಗೊಳ್ಳಿ, ಕಾರ್ಯದರ್ಶಿ ಪರ್ವೇಜ್ ಮುಂತಾದವರು ಉಪಸ್ಥಿತರಿದ್ದರು. ಮೊಹಮ್ಮದ್ ಮೌಲಾ ಕಾರ್ಯಕ್ರಮ ನಿರೂಪಿಸಿದರು.