ಉಡುಪಿ: ಕಾರಾಗೃಹದಲ್ಲಿ ಸಾಕ್ಷರತಾ ದಿನಾಚರಣೆ
ಉಡುಪಿ, ಅ.12: ಕೇಂದ್ರ ಸರಕಾರದ ಉಲ್ಲಾಸ್ ನವ ಭಾರತ ಸಾಕ್ಷರತಾ ಕಾರ್ಯಕ್ರಮದಡಿ ಉಡುಪಿ ಜಿಲ್ಲಾ ಕಾರಾಗೃಹದಲ್ಲಿದ್ದ 8 ಅನಕ್ಷರಸ್ಥರನ್ನು ಗುರುತಿಸಿ ಅವರನ್ನು ಸಾಕ್ಷರರನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಾರಾಗೃಹದ ಕೈದಿಗಳಿಗೆ ವಯಸ್ಕರ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಬಾಳಿಗೆ ಬೆಳಕು ಮತ್ತು ಬರೆಯುವ ಪುಸ್ತಕ ಸವಿ ಬರಹ ಎಂಬ ಪಠ್ಯಪುಸ್ತಕವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಯೋಗಾನರಸಿಂಹಸ್ವಾಮಿ ಕೆ.ಎಂ. ಅವರು ನಿತ್ಯ ಜೀವನದಲ್ಲಿ ಶಿಕ್ಷಣದ ಪಾತ್ರ ಮತ್ತು ಅವಶ್ಯಕತೆಯ ಬಗ್ಗೆ ಖೈದಿಗಳಿಗೆ ತಿಳಿಸಿದರು.
ವಯಸ್ಕರ ಶಿಕ್ಷಣ ಕಾರ್ಯಕ್ರಮ ಸಹಾಯಕಿ ಶ್ವೇತಾ ಮತ್ತು ಜಿಲ್ಲಾ ಕಾರಾಗೃಹ ಅಧೀಕ್ಷಕರು ಸಿದ್ಧರಾಮ ಪಾಟೀಲ್ ಉಪಸ್ಥಿತರಿದ್ದರು.
Next Story