ಉಡುಪಿ : ಆನ್ಲೈನ್ ಟಾಸ್ಕ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ
ಉಡುಪಿ: ವರ್ಕ್ ಫ್ರಮ್ ಹೋಮ್ನಲ್ಲಿ ಟಾಸ್ಕ್ ನೀಡಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಂ ಎಪ್ಲಿಕೇಶನ್ನಲ್ಲಿ ಕಾರ್ಕಳದ ರಜನಿ(31) ಎಂಬವರನ್ನು ಸಂಪರ್ಕಿಸಿ, ಟ್ರೆಡಿಂಗ್ ಆ್ಯಪ್ನಿಂದ ಮನೆಯಲ್ಲಿಯೇ ಉದ್ಯೋಗ ನಡೆಸುವಂತೆ ತಿಳಿಸಿದ್ದರು. ಇದನ್ನು ನಂಬಿದ ಅವರು ಅಪರಿಚಿತರು ಕಳುಹಿಸಿದ ಟ್ರೆಡಿಂಗ್ ಲಿಂಕ್ನಲ್ಲಿನ ಟಾಸ್ಕ್ನ್ನು ಪೂರ್ಣಗೊಳಿಸಿದ್ದು, ಆ ಬಳಿಕ ಆರೋಪಿ ಗಳು ಹಣವನ್ನು ಗಳಿಸಲು ಹಣವನ್ನು ಪಾವತಿಸುವಂತೆ ಸೂಚಿಸಿದ್ದರು.
ಅದರಂತೆ ರಜನಿ ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಆನ್ಲೈನ್ ಮೂಲಕ ಒಟ್ಟು 1,43,001ರೂ. ಹಣವನ್ನು ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಟಾಸ್ಕ್ ನಡೆಸುವ ರೀತಿಯಲ್ಲಿ ಹಣವನ್ನು ಪಡೆದು, ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story