ಉಡುಪಿ ನಗರಸಭೆ: ಕುಡಿಯುವ ನೀರಿನ ದರ ಪರಿಷ್ಕರಣೆ
ಉಡುಪಿ, ಅ.6: ಉಡುಪಿ ನಗರಸಭೆಯ ವತಿಯಿಂದ ಕುಡಿಯುವ ನೀರಿನ ಬಳಕೆಯ ಶುಲ್ಕವನ್ನು ಪರಿಷ್ಕರಿಸಿ, ದರ ಏರಿಕೆ ಮಾಡಲಾಗಿದೆ. ಸರಕಾರದ ಆದೇಶದಂತೆ ಕುಡಿಯುವ ನೀರಿನ ದರವನ್ನು ಪ್ರತಿ 3 ವರ್ಷಕ್ಕೊಮ್ಮೆ ಪರಿಷ್ಕರಿಸ ಬೇಕಿದ್ದು, ಕಳೆದ12ವರ್ಷಗಳಲ್ಲಿ ಉಡುಪಿಯಲ್ಲಿ ದರವನ್ನು ಪರಿಷ್ಕರಿಸಲಾಗಿಲ್ಲ.
ಪ್ರಸ್ತುತ ವಿದ್ಯುತ್, ಇತರೇ ನಿರ್ವಹಣಾ ವೆಚ್ಚಗಳು ಅಧಿಕವಾಗಿರು ವುದರಿಂದ ದರವನ್ನು ಪರಿಷ್ಕರಿಸುವುದು ಅನಿವಾರ್ಯ ವಾಗಿದ್ದು, ನವೆಂಬರ್ 1ರಿಂದ ಅನ್ವಯವಾಗುವಂತೆ ಕುಡಿಯುವ ನೀರಿನ ಬಳಕೆ ಶುಲ್ಕವನ್ನು ಈ ಕೆಳಕಂಡಂತೆ ಪರಿಷ್ಕರಿ ಸಲಾಗುವುದು.
ಒಂದು ಸಾವಿರ ಲೀಟರ್ ನೀರು: ಗೃಹ ಬಳಕೆಗೆ 8 ಸಾವಿರ ಲೀ.ವರೆಗೆ 11 ರೂ., 8 ಸಾವಿರ ಲೀ. ಮೇಲ್ಪಟ್ಟು ಬಳಕೆಯಾ ದಲ್ಲಿ 15 ರೂ., 15 ಸಾವಿರ ಲೀ. ಮೇಲ್ಪಟ್ಟು ಬಳಕೆಯಾದಲ್ಲಿ 20 ರೂ. ಹಾಗೂ 20,000 ಲೀ. ಗಿಂತ ಅಧಿಕ ಬಳಕೆಯಾ ದಲ್ಲಿ 30 ರೂ. ವಿಧಿಸಲಾಗುವುದು.
ಗೃಹೇತರ ಬಳಕೆಗೆ 8 ಸಾವಿರ ಲೀ.ವರೆಗೆ 25 ರೂ., 8 ಸಾವಿರ ಲೀ. ಮೇಲ್ಪಟ್ಟು ಬಳಕೆಯಾದಲ್ಲಿ 35 ರೂ., 15 ಸಾವಿರ ಲೀ. ಮೇಲ್ಪಟ್ಟು ಬಳಕೆ ಮಾಡಿದ್ದಲ್ಲಿ 50 ರೂ. ವಿಧಿಸಲಾಗುವುದು.
ವಾಣಿಜ್ಯ/ ಕೈಗಾರಿಕೆಗೆ 8 ಸಾವಿರ ಲೀ.ವರೆಗೆ 50 ರೂ., 8 ಸಾವಿರ ಲೀ. ಮೇಲ್ಪಟ್ಟು ಬಳಕೆ ಮಾಡಿದ್ದಲ್ಲಿ 60 ರೂ. ಹಾಗೂ 15,000 ಲೀ. ಮೇಲ್ಪಟ್ಟು ಬಳಕೆ ಮಾಡಿದ್ದಲ್ಲಿ 70 ರೂ. ವಿಧಿಸಲಾಗುವುದು.
ಪ್ರತೀ ಸಂಪರ್ಕಕ್ಕೆ ಗೃಹ ಬಳಕೆಗೆ 88 ರೂ. ಗೃಹೇತರ ಸಂಪರ್ಕಕ್ಕೆ 200 ರೂ. ಹಾಗೂ ವಾಣಿಜ್ಯ/ ಕೈಗಾರಿಕೆಗಳ ಸಂಪ ರ್ಕಕ್ಕೆ 400 ರೂ. ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.