ಉಡುಪಿ: ಪಾರ್ಟ್ಟೈಮ್ ಜಾಬ್ ಹೆಸರಿನಲ್ಲಿ ಆನ್ಲೈನ್ ವಂಚನೆ
ಉಡುಪಿ, ಆ.14: ಪಾರ್ಟ್ಟೈಮ್ ಜಾಮ್ ಹೆಸರಿನಲ್ಲಿ ಆನ್ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಮಾಧವ ನಗರದ ನಿವಾಸಿ ಮೂಲತಃ ಚಿಕ್ಕಮಗಳೂರಿನ ಪ್ರಥ್ವಿರಾಜ್ ಎನ್.ಸಿ. ಎಂಬವರ ಮೊಬೈಲ್ಗೆ ಅಪರಿಚಿತ ವ್ಯಕ್ತಿಗಳು ಆ.7ರಂದು ಕರೆ ಮಾಡಿ, ಪಾರ್ಟ್ಟೈಮ್ ಜಾಬ್ ನೀಡುವುದಾಗಿ ನಂಬಿಸಿ, ಆನ್ಲೈನ್ ನಲ್ಲಿ ಲಿಂಕ್ ಕಳುಹಿಸಿದರು. ಬಳಿಕ ಅಪರಿಚಿತ ವ್ಯಕ್ತಿಗಳು ಇವರಿಂದ ಹಂತಹಂತವಾಗಿ ಒಟ್ಟು 2,70,999 ರೂ. ಹಣವನ್ನು ಆನ್ ಲೈನ್ ಮೂಲಕ ಪಡೆದು, ಉದ್ಯೋಗ ನೀಡದೇ, ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story